ಇದೊಂದೇ ಕಾರಣಕ್ಕೆ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ರಾ ನಿವೇದಿತಾ ಗೌಡ, ಚಂದನ್‌ ಶೆಟ್ಟಿ?; ಪ್ರಶ್ನೆ ಮಾಡಿದ ಫ್ಯಾನ್ಸ್​

Niveditha Gowda
Published on

ಬೆಂಗಳೂರು: ಕಿರುತೆರೆ ಬೇಬಿ ಡಾಲ್​ ನಿವೇದಿತಾ ಗೌಡ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ವಿಚ್ಛೇದನ ಪಡೆದು ಕೊಳ್ಳಲು ಅರ್ಜಿ ಹಾಕಿದ್ದಾರೆ. ಅದರ ಬೆನ್ನಲ್ಲಿಯೇ ಇವರ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಚರ್ಚೆ ಶುರುವಾಗಿದೆ. ದಂಪತಿ ಈ ಕುರಿತಾಗಿ ಎಲ್ಲೂ ಮಾತನಾಡಿಲ್ಲ. ಆದರೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ಇಬ್ಬರ ನಡುವಿನ ಪ್ರೀತಿ ಗುಸುಗುಸುಗಳ ನಡುವೆ, 2020ರ ಫೆಬ್ರವರಿ 26ರಂದು ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಅವರು ಚಂದನ್‌ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಪ್ರಪೋಸ್‌ ಮಾಡಿದ್ದರು.

2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಚಂದನ್ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಗೌಡ ಆಗಾಗ ಒಟ್ಟಿಗೆ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದರು. ಆದರೆ ಈ ಜೋಡಿ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ ಇಬ್ಬರು ಒಪ್ಪಿಗೆ ಸೂಚಿಸಿ ವಿಚ್ಛೇಧನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕೆರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಲುತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇಬ್ಬರು ಪರಸ್ಪರ ಮಾತಾಡಿಕೊಂಡು ತಮ್ಮ ನಿರ್ಧಾರದ ಮೇರೆಗೆ ಡಿವೋರ್ಸ್​ ಪಡೆಯುತ್ತಿದ್ದಾರೆ. ಕರಿಯರ್ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದೊಂದೆ ಕಾರಣಕ್ಕೆ ಈ ಜೋಡಿ ವಿಚ್ಛೇಧನಕ್ಕೆ ಮುಂದಾದ್ರಾ? ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.

ಬಿಗ್‌ ಬಾಸ್‌ ಬಳಿಕ ರಾಜಾ ರಾಣಿ ಶೋನಲ್ಲೂ ಈ ಜೋಡಿ ಕಾಣಿಸಿಕೊಂಡಿದ್ದರು. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್‌ ಕೂಡ ಆಗಿದ್ದರು. ಸೋಶಿಯಲ್​​ ಮೀಡಿಯಾದಲ್ಲಿ ರಿಲ್ಸ್​ ಮಾಡಿ ಹಂಚಿಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮ ಇದ್ದರು ಇಬ್ಬರು ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇಷ್ಟೊಂದು ಅನ್ಯೋನತೆಯಿಂದ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಅವರ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಬಗ್ಗೆ ಇನ್ನೂ ಗೊಂದಲಗಳಿವೆ ಎನ್ನಲಾಗಿದೆ.

ಪರಸ್ಪರ ಒಪ್ಪಿಗೆಯ ಮೂಲಕ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರೂ ಕೂಡ, ಇಬ್ಬರ ನಡುವಿನ ದಾಂಪತ್ಯ ತೋರಿಕೆಯಲ್ಲಿ ಮಾತ್ರವೇ ಚೆನ್ನಾಗಿತ್ತು ಎನ್ನುವ ಮಾತುಗಳೂ ಇವೆ. ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಡಿಲೀಟ್​​ ಮಾಡಿದ್ರೆ, ಅನ್​ಫಾಲೋ ಮಾಡಿದ್ರೆ ಡಿವೋರ್ಸ್​ ಮಾಡಿಕೊಳ್ಳುವ ಸೂಚನೆ ನೀಡುತ್ತಾರೆ. ಆದರೆ ಈ ಜೋಡಿಯಲ್ಲಿ ಇಂತಹ ಯಾವುದೇ ವ್ಯತ್ಯಾಸ ಕೂಡಾ ಆಗಿಲ್ಲ. ಸೋಶಿಯಲ್​​ ಮೀಡಿಯಾದಲ್ಲಿ ರೀಲ್ಸ್​​, ಪೋಟೋಗಳು ಹಾಗೆ ಇದೆ. ಈ ಜೋಡಿಯ ವಿಚ್ಛೇಧನ ಕುರಿತಾಗಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net