ತನ್ನದೇ ಸೆಕ್ಸ್​ ವಿಡಿಯೋವನ್ನು ಅಶ್ಲೀಲ ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ, ಅರೆಸ್ಟ್​ ಆದ ಯೂನಿವರ್ಸಿಟಿ ಪ್ರಾಧ್ಯಾಪಕ

Proffessor
Published on

ದಿಬ್ರುಗಢ್​: ಆಸ್ಸಾಂನ ದಿಬ್ರುಗಢ್​​ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಪಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಯೂನಿವರ್ಸಿಟಿಯೇ ಪೊಲೀಸರಿಗೆ ದೂರು ನೀಡಿತ್ತು.  ಸುಮಾರು 30 ವರ್ಷದ ಅಸಿಸ್ಟಂಟ್ ಪ್ರೊಫೆಸರ್​ ಅಶ್ಲೀಲ ವೆಬ್​​ಸೈಟ್​ಗಳಲ್ಲಿ ಸೆಕ್ಸ್​ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ ಎಂದು ಯೂನಿವರ್ಸಿಟಿ ದೂರಿನಲ್ಲಿ ಉಲ್ಲೇಖಿಸಿದೆ.

ಗಣಿತ ಕಲಿಸುತ್ತಿದ್ದ ಈ ಪ್ರೊಫೆಸರ್​​ನ ಸೆಕ್ಸ್​ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್​ ಆಗಿತ್ತು. ಮಹಿಳೆಯೋರ್ವರ ಜತೆ ಸೆಕ್ಸ್ ಮಾಡಿ ಆ ವಿಡಿಯೋವನ್ನು ಆತನೇ ಅಶ್ಲೀಲ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಿದ್ದ. ಆ ಬಗ್ಗೆ ಯೂನಿವರ್ಸಿಟಿಯಿಂದಲೇ ದೂರು ಬಂದಿತ್ತು. ನಾವು ಸಹಾಯಕ ಪ್ರಾಧ್ಯಾಪಕನ ಮನೆಯನ್ನು ರೇಡ್​ ಮಾಡಿ, ಆತನ ಲ್ಯಾಪ್​ಟಾಪ್​ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆ ಪ್ರೊಫೆಸರ್​ ತಾನು ವಿಡಿಯೋ ಅಪ್ಲೋಡ್​ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದೀಗ ವೈರಲ್​ ಆದ ವಿಡಿಯೋ ಮೂರು ವರ್ಷದ ಹಿಂದೆ ಗುವಾಹಟಿಯ ಹೋಟೆಲ್​ವೊಂದರಲ್ಲಿ ಮಹಿಳೆಯೊಂದಿಗೆ ಸೆಕ್ಸ್​ ಮಾಡಿದ್ದು ಎಂದು ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಹೀಗೆ ತಾನು ಲೈಂಗಿಕ ಕ್ರಿಯೆ ನಡೆಸುವುದನ್ನು ತನ್ನೊಂದಿಗೆ ಇರುವ ಮಹಿಳೆಯ ಗಮನಕ್ಕೆ ಬಾರದಂತೆ ವಿಡಿಯೋ ಮಾಡುತ್ತಿದ್ದ. ಆ ಕ್ಯಾಮರಾವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿ ಇರುವವಳು ಯೂನಿವರ್ಸಿಟಿಯ ಯಾವುದೇ ವಿದ್ಯಾರ್ಥಿನಿಯೂ ಅಲ್ಲ ಎಂದ ಆ ಶಿಕ್ಷಕ ಸ್ಪಷ್ಟಪಡಿಸಿದ್ದಾರೆ. ಆದರೂ ಇನ್ನೊಮ್ಮೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net