ಶ್ರೀಲಂಕಾದ ರುಮೇಶ್​ಗೆ ಡೈಮಂಡ್​ ಲೀಗ್​ ಟ್ರೋಫಿ

ಶ್ರೀಲಂಕಾದ ರುಮೇಶ್​ಗೆ ಡೈಮಂಡ್​ ಲೀಗ್​ ಟ್ರೋಫಿ
ಶ್ರೀಲಂಕಾದ ರುಮೇಶ್​ಗೆ ಡೈಮಂಡ್​ ಲೀಗ್​ ಟ್ರೋಫಿ
Published on
ಬ್ರಸೆಲ್ಸ್​: ಯಶಸ್ಸಿನ ಓಟ ಮುಂದುವರಿಸಿರುವ ಶ್ರೀಲಂಕಾದ ಜಾವೆಲಿನ್​ ಎಸೆತಗಾರ ರುಮೇಶ್​ ಪಥಿರಗೆ ಡೈಮಂಡ್​ ಲೀಗ್​ ಫೈನಲ್ಸ್​ (Diamond League Final) ಕಿರೀಟ ಮುಡಿಗೇರಿಕೊಂಡರು. ಇದರೊಂದಿಗೆ ಡೈಮಂಡ್​ ಟ್ರೋಫಿ ಗೆದ್ದ ದ್ವೀಪರಾಷ್ಟ್ರದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಬ್ರಸೆಲ್ಸ್​ನ ಕಿಂಗ್​ ಬೌಡೊಯಿನ್​ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಡೈಮಂಡ್​ ಲೀಗ್​ನ ಅಂತಿಮ ಚರಣದ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ರುಮೇಶ್​, ತನ್ನ ಮೂರನೇ ಪ್ರಯತ್ನದಲ್ಲಿ 89.04 ಮೀಟರ್​ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಪ್ರಶಸ್ತಿ ಒಲಿಸಿಕೊಂಡರು. ಜತೆಗೆ ಈ ಸಾಧನೆ ಮಾಡಿದ ದಣ ಏಷ್ಯಾದ ಎರಡನೇ ಅಥ್ಲೀಟ್​ ಎನಿಸಿದರು. ಅವಳಿ ಒಲಿಂಪಿಕ್ಸ್​ ಪದಕ ವಿಜೇತ ಭಾರತದ ನೀರಜ್​ ಚೋಪ್ರಾ ಮೊದಲಿಗ.

80.42 ಮೀಟರ್​ ಎಸೆತದೊಂದಿಗೆ ಸ್ಪರ್ಧೆ ಆರಂಭಿಸಿದ 23 ವರ್ಷದ ರುಮೇಶ್​ ನಂತರ ತನ್ನ ಆರು ಪ್ರಯತ್ನಗಳಲ್ಲಿ ಕ್ರಮವಾಗಿ 79.73 ಮೀ, 89.04 ಮೀ, 85.96 ಮೀ, 85.76 ಮೀ ಎಸೆದರೆ, ಕೊನೇ ಯತ್ನದಲ್ಲಿ ಫೌಲ್​ ಎಸಗಿಸಿದರು. ಹವಾಮಾನ ಪರಿಸ್ಥಿತಿ ಬಹಳ ಕಷ್ಟಕರವಾಗಿದ್ದ ಕಾರಣ, ದೂರಕ್ಕೆ ಎಸೆಯಲು ಸಾಧ್ಯವಾಗಲಿಲ್ಲ. ಆದರೆ, ಶ್ರೀಲಂಕಾದಂಥ ಸಣ್ಣ ದೇಶದಿಂದ ಇಂಥ ಪ್ರಮುಖ ಕ್ರೀಡಾಕೂಟವನ್ನು ಗೆದ್ದಿರುವುದು ನಿಜಕ್ಕೂ ಖುಷಿ ನೀಡಿದೆ ಎಂದು ರುಮೇಶ್​ ಸಂತಸ ವ್ಯಕ್ತಪಡಿಸಿದರು.
ಪೋಲೆಂಡ್​ನ ಡೇವಿಡ್​ ವೆಗ್ನರ್​ ವೈಯಕ್ತಿಕ ಅತ್ಯುತ್ತಮ 87.47 ಮೀಟರ್​ ಎಸೆತದೊಂದಿಗೆ ದ್ವೀತಿಯ ಸ್ಥಾನ ಪಡೆದರೆ, ಟ್ರಿನಿಡಾಡ್​ ಮತ್ತು ಟೊಬಾಗೋದ ಕೆಶೋರ್ನ್​ ವಾಲ್ಕಾಟ್​ 83.99 ಮೀಟರ್​ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು.

ಡೈಮಂಡ್​ ಲೀಗ್​ ಫೈನಲ್ಸ್​ಗೆ ಅರ್ಹತೆ ಪಡೆದಿದ್ದ ಭಾರತದ ನೀರಜ್​ ಚೋಪ್ರಾ ಗಾಯದ ಸಮಸ್ಯೆಯಿಂದಾಗಿ ಕೂಟದಿಂದ ಹೊರಗುಳಿದಿದ್ದರು. ಹಾಲಿ ವರ್ಷ ಈ ವರ್ಷ ಅದ್ಭುತ ಫಾಮ್​ರ್ನಲ್ಲಿರುವ ರುಮೇಶ್​ ರೋಮ್​ ಚರಣದಲ್ಲಿ 82.62 ಮೀಟರ್​ ದೂರ ಎಸೆದರೆ, ಗ್ಲಾಸ್ಗೋ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದರು. ಅವರು ಹಾಲಿ ಋತುವಿನಲ್ಲಿ 2 ಬಾರಿ 92 ಮೀ.ಗೂ ಅಧಿಕ ದೂರ ಭರ್ಜಿ ಎಸೆದ ಸಾಧನೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net