ಡಯಾಲಿಸಿಸ್ ಘಟಕಕ್ಕೆ ಬೀಗ ಹಾಕಿ ಮುಷ್ಕರಕ್ಕೆ ತೆರಳಿದ ಸಿಬ್ಬಂದಿ

30-RNR-01
Published on

ರಾಣೆಬೆನ್ನೂರ: ವೇತನ ಪಾವತಿ ಸೇರಿ ಇತರ ಬೇಡಿಕೆ ಈಡೇರಿಸಲು ರಾಜ್ಯಾದ್ಯಂತ ಡಯಾಲಿಸಿಸ್ ಘಟಕದ ಸಿಬ್ಬಂದಿ ಮುಷ್ಕರ ಹಮ್ಮಿಕೊಂಡ ಹಿನ್ನೆಲೆಯಲ್ಲಿ ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದ ಡಯಾಲಿಸಿಸ್ ಘಟಕಕ್ಕೂ ಸಿಬ್ಬಂದಿ ಬೀಗ ಜಡಿದಿದ್ದಾರೆ.
ಇಲ್ಲಿಯ ಡಯಾಲಿಸಿಸ್ ಘಟಕದಲ್ಲಿ ಮೂವರು ಸಿಬ್ಬಂದಿಗಳಿದ್ದು ಮೂವರು ಮುಷ್ಕರಕ್ಕೆ ತೆರಳಿದ ಹಿನ್ನೆಲೆಯಲ್ಲಿ ಘಟಕಕ್ಕೆ ಬೀಗ ಹಾಕಲಾಗಿದೆ. ತಾಲೂಕಿನಲ್ಲಿ 15 ಜನ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್‌ಗಾಗಿ ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರವೇ ಡಯಾಲಿಸಿಸ್ ಮಾಡಿಸಲಾಗಿದೆ.
ಯಾರಾದರೂ ತುರ್ತಾಗಿ ಡಯಾಲಿಸಿಸ್ ಮಾಡಬೇಕಾಗಿ ಬಂದಲ್ಲಿ ಅಂಥವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅವರ ಖರ್ಚನ್ನು ತಾಲೂಕು ಆಸ್ಪತ್ರೆ ವತಿಯಿಂದ ಭರಿಸಲಾಗುವುದು ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net