ಯುದ್ಧ ನಡೆದರೆ ಪಾಕ್ ವಿರುದ್ಧ ಸಂಗ್ರಾಮಕ್ಕೆ ಬರ್ತಾರಾ ಧೋನಿ, ಸಚಿನ್ ತೆಂಡುಲ್ಕರ್ | Cricketers

dhoni
Published on

Terror attack: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಎರಡೂ ದೇಶಗಳ ಗಡಿಗಳಲ್ಲಿ ಮಿಲಿಟರಿ ಚಟುವಟಿಕೆಗಳು ಕಂಡುಬಂದಿದ್ದು, ಇದು ಯುದ್ಧದ ಮುನ್ಸೂಚನೆಯನ್ನುಸೂಚಿಸುತ್ತದೆ.

ಸಂದಹಾಗೆ, ಯಾವುದೇ ದೇಶವು ಇನ್ನೂ ಅಂತಹ ಘೋಷಣೆಯನ್ನು ಮಾಡಿಲ್ಲ. ಇಷ್ಟೆಲ್ಲಾ ಇದ್ದರೂ ಪಾಕಿಸ್ತಾನ ಭಾರತಕ್ಕೆ ಪರಮಾಣು ದಾಳಿಯ ಬೆದರಿಕೆ ಹಾಕುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರಿಕೆಟಿಗರನ್ನು ಗಡಿಯಲ್ಲಿ ಹೋರಾಡಲು ಕಳುಹಿಸಲಾಗುತ್ತದೆಯೇ ಎಂಬ ಪ್ರಶ್ನೆ ಉಂಟಾಗಿದೆ.

ಧೋನಿ ಮತ್ತು ಸಚಿನ್‌ರಂತಹ ಅನೇಕ ಆಟಗಾರರು ಭಾರತೀಯ ಸೇನೆಯಲ್ಲಿ ಅಧಿಕಾರಿ ಶ್ರೇಣಿಯಲ್ಲಿರುವುದರಿಂದ ಈ ಪ್ರಶ್ನೆ ಉದ್ಭವಿಸುತ್ತದೆ. ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರೆ, ಸಚಿನ್ ತೆಂಡೂಲ್ಕರ್ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ಇದಲ್ಲದೆ ಸೈನ್ಯದಲ್ಲಿ ಒಂದಲ್ಲ ಒಂದು ಹುದ್ದೆಯನ್ನು ಹೊಂದಿರುವ ಇತರ ಆಟಗಾರರಿದ್ದಾರೆ.

ಪ್ರಾದೇಶಿಕ ಸೈನ್ಯದಲ್ಲಿರುವ ಆಟಗಾರರು

ಭಾರತೀಯ ಸೇನೆಯು ಅನೇಕ ಆಟಗಾರರಿಗೆ ಗೌರವ ಬಿರುದುಗಳನ್ನು ನೀಡುತ್ತದೆ. ಇದರಲ್ಲಿ ಧೋನಿ ಅಥವಾ ಸಚಿನ್ ಮಾತ್ರ ಸೇರಿಲ್ಲ. ಬದಲಿಗೆ ಮಾಜಿ ನಾಯಕ ಕಪಿಲ್ ದೇವ್, ಶೂಟರ್ ಅಭಿನವ್ ಬಿಂದ್ರಾ, ರಾಜಕಾರಣಿ ಅನುರಾಗ್ ಠಾಕೂರ್, ಸಚಿನ್ ಪೈಲಟ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ನಾನಾ ಪಾಟೇಕರ್ ಅವರ ಹೆಸರುಗಳೂ ಸೇರಿವೆ. ಇವರೆಲ್ಲರೂ ಪ್ರಾದೇಶಿಕ ಸೈನ್ಯದಲ್ಲಿ ಒಂದಲ್ಲ ಒಂದು ಹುದ್ದೆಯನ್ನು ಹೊಂದಿದ್ದಾರೆ.

ಇದರಲ್ಲಿ 18 ರಿಂದ 42 ವರ್ಷದೊಳಗಿನ ಯಾವುದೇ ನಾಗರಿಕರು ಭಾಗವಹಿಸಬಹುದು. ಪ್ರಾದೇಶಿಕ ಸೇನೆಗೆ ನೇಮಕಾತಿಯನ್ನು ಸಹ ಸೇನೆಯೇ ಮಾಡುತ್ತದೆ ಮತ್ತು ಇದಕ್ಕಾಗಿ ಅಭ್ಯರ್ಥಿಯು ವೈದ್ಯಕೀಯವಾಗಿ ಸಂಪೂರ್ಣವಾಗಿ ಸದೃಢರಾಗಿರಬೇಕು. ಒಂದು ರೀತಿಯಲ್ಲಿ, ಪ್ರಾದೇಶಿಕ ಸೇನೆಯು, ಯಾವುದೋ ಕಾರಣದಿಂದ ಸೈನ್ಯಕ್ಕೆ ಸೇರಲು ಸಾಧ್ಯವಾಗದ ಯುವಕರಿಗೆ ದೇಶ ಸೇವೆ ಮಾಡಲು ಅವಕಾಶವನ್ನು ನೀಡುತ್ತದೆ.

(ಏಜೆನ್ಸೀಸ್)

ಪ್ರಾದೇಶಿಕ ಸೇನೆಯಲ್ಲಿ ಗೌರವ ಹುದ್ದೆ ಪಡೆದಿರುವ ಧೋನಿ ಮತ್ತು ಸಚಿನ್‌ರಂತಹ ಕ್ರಿಕೆಟಿಗರನ್ನು ಯುದ್ಧದಂತಹ ಸಂದರ್ಭಗಳಲ್ಲಿ ಗಡಿಗೆ ಕಳುಹಿಸಬಹುದೇ ಎಂಬುದು ಬಹು ಮುಖ್ಯವಾದ ಪ್ರಶ್ನೆಯಾಗಿದೆ. ಯುದ್ಧದ ಸಂದರ್ಭದಲ್ಲಿ, ಭಾರತೀಯ ಸೇನೆಯು ಮೊದಲು ಮುಂದೆ ಬರುತ್ತದೆ ಮತ್ತು ಸೇನಾ ಸೈನಿಕರು ಗಡಿಗಳನ್ನು ರಕ್ಷಿಸುತ್ತಾರೆ. ಪರಿಸ್ಥಿತಿ ಹದಗೆಟ್ಟಾಗ ಅರೆಸೈನಿಕ ಪಡೆಗಳ ಸಹಾಯವನ್ನು ಪಡೆಯಲಾಗುತ್ತದೆ. ಸೈನ್ಯಕ್ಕೆ ಅಗತ್ಯವಿದ್ದರೆ, ಯುದ್ಧಕ್ಕಾಗಿ ಪ್ರಾದೇಶಿಕ ಸೈನ್ಯವನ್ನು ಸಹ ಕರೆಯಬಹುದು, ಹಾಗಾಗಿ ಪ್ರಾದೇಶಿಕ ಸೈನ್ಯವನ್ನು ಎರಡನೇ ಸಾಲಿನ ರಕ್ಷಣಾ ಪಡೆ ಎಂದೂ ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net