

ಧಾರವಾಡ: ವಿಜಯ ದಶಮಿ ಅಂಗವಾಗಿ ಮೈಸೂರು ದಸರಾ ಮಾದರಿಯಲ್ಲೇ ಧಾರವಾಡದಲ್ಲೂ ಬುಧವಾರ ಜಂಬೂ ಸವಾರಿ ಉತ್ಸವ ನಡೆಯಿತು.
ಎರಡು ಆನೆಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಬಂಡೆಮ್ಮ ದೇವಿ ಮೂರ್ತಿ ಇದ್ದ ಅಂಬಾರಿ ಹೊತ್ತ ಆನೆಯ ಮೆರವಣಿಗೆಗೆ ಗಾಂಧಿನಗರ ಈಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಈ ಜಂಬೂ ಸವಾರಿ ಉತ್ಸವಕ್ಕೆ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಗುರುರಾಜ ಹುಣಸಿಮರದ ಸೇರಿ ಅನೇಕ ಮಠಾಧೀಶರು ಪುಷ್ಪ ಹಾಕುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಜಂಬೂ ಸವಾರಿ ಮೆರವಣಿಗೆ ವಿದ್ಯಾಗಿರಿ, ಹೊಸ ಯಲ್ಲಾಪುರ, ಗಾಂಧಿಚೌಕ್, ಸುಭಾಷ ರಸ್ತೆ ಮೂಲಕ ಕಲಾಭವನದವರೆಗೂ ಸಾಗಿತು. ಈ ಉತ್ಸವದಲ್ಲಿ ದಿಂಡಿ ಮೇಳ, ಸಾರೋಟ, ಕುದುರೆ, ಪುರವಂತರ ಮೇಳ, ಬೊಂಬೆ ಕುಣಿತ ಸೇರಿ 50ಕ್ಕೂ ಅಧಿಕ ಕಲಾ ಮೇಳದವರು ಪಾಲ್ಗೊಂಡಿದ್ದರು. ಈ ಜಂಬೂ ಸವಾರಿ ಉತ್ಸವವನ್ನು ಧಾರವಾಡದ ಜನ ರಸ್ತೆ ಬದಿ ನಿಂತು ಕುತೂಹಲದಿಂದ ವೀಕ್ಷಿಸಿದರು. ಈ ಜಂಬೂ ಸವಾರಿ ಎಲ್ಲರ ಕಣ್ಮನ ಸೆಳೆಯಿತು. ಮುಸ್ಲಿಂ ಯುವ ಸಂಘದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾವಿದರಿಗೆ ಶರಬತ್ ವಿತರಿಸಲಾಯಿತು.
ಮೆರವಣಿಗೆ ಉದ್ಘಾಟನೆ ವೇಳೆ ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಶ್ರೀ ಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಮೈಸೂರು ದಸರಾಗೆ ಎಷ್ಟು ಅನುದಾನ ಕೊಡುತ್ತಾರೆಯೋ ಅದರ ಅರ್ಧ ಅನುದಾನದವನ್ನು ಧಾರವಾಡ ದಸರಾಗೆ ಕೊಡುವಂತಾದರೆ ಮಾತ್ರೆ ಪ್ರಾದೇಶಿಕ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಪದಾಧಿಕಾರಿಗಳಾದ ನಾರಾಯಣ ೋರ್ಪಡೆ, ಮಂಜುಗೌಡ ಪಾಟೀಲ, ಪಿ.ಎಚ್.ಕಿರೇಸೂರು, ವಿಲಾಸ ತಿಬೇಲಿ, ಯಶವಂತರಾಮ ಕದಂ, ಹನಮೇಶ ಸರ್ಾ, ಮನೋಜ ಸಂಗೊಳ್ಳಿ ಇತರರಿದ್ದರು.