ಎನ್.ಆರ್.ಪುರ ಟಿಎಚ್‌ಒಗೆ ಧರ್ಮದೇಟು

20bhr 1
ಬಾಳೆಹೊನ್ನೂರಿನಲ್ಲಿರುವ ಆರೋಗ್ಯ ಇಲಾಖೆ ವೈದ್ಯರ ವಸತಿ ಗೃಹ.
Published on

ಬಾಳೆಹೊನ್ನೂರು : ಪಟ್ಟಣದ ಆರೋಗ್ಯ ಇಲಾಖೆ ವೈದ್ಯರ ವಸತಿ ಗೃಹದಲ್ಲಿ ಎನ್.ಆರ್.ಪುರ ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ (ಟಿಎಚ್‌ಓ) ಎಲ್ಡೋಸ್ ಟಿ.ವರ್ಗೀಸ್ ಡಿ.ಗ್ರೂಪ್ ಮಹಿಳಾ ಸಿಬ್ಬಂದಿಯೊಂದಿಗಿರುವುದನ್ನು ಕಂಡು ಮಹಿಳೆ ಕುಟುಂಬದ ಸದಸ್ಯರು ಬುಧವಾರ ವೈದ್ಯನಿಗೆ ಧರ್ಮದೇಟು ನೀಡಿದ್ದಾರೆ.
ಶಾಂತಿನಗರ-ಪೇಟೆಕೆರೆ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ವೈದ್ಯರ ವಸತಿಗೃಹಕ್ಕೆ ತಾಲೂಕು ಆಸ್ಪತ್ರೆ ಟಿಎಚ್‌ಓ ಎಲ್ಡೋಸ್ ತಾಲೂಕು ಆಸ್ಪತ್ರೆ ಗ್ರೂಪ್ ಡಿ ಮಹಿಳಾ ಸಿಬ್ಬಂದಿಯೊಬ್ಬರನ್ನು ಬುಧವಾರ ಬೆಳಗ್ಗೆ ಕರೆದುಕೊಂಡು ಬಂದು ಹಿಂಬದಿ ಬಾಗಿಲಿಂದ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಚಾರ ಮಹಿಳೆ ಕುಟುಂಬಕ್ಕೆ ದೊರೆಯುತ್ತಿದ್ದಂತೆ ವಸತಿ ಗೃಹದಲ್ಲಿದ್ದ ವೈದ್ಯನ ಮೇಲೆ ದಾಳಿ ಮಾಡಿದ್ದಾನೆ.
ಕುಟುಂಬದವರು ದಾಳಿ ಮಾಡುವ ವೇಳೆ ಮಹಿಳೆಯನ್ನು ಕೊಠಡಿಯೊಂದರಲ್ಲಿ ವೈದ್ಯರು ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡು ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯರು ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಒತ್ತಾಯಪೂರ್ವಕವಾಗಿ ನನ್ನನ್ನು ವಸತಿಗೃಹಕ್ಕೆ ಕರೆದುಕೊಂಡು ಬಂದು ಕೊಠಡಿಯಲ್ಲಿ ಕೂಡಿ ಹಾಕಿದ್ದರು ಎಂದು ಡಿ ಗ್ರೂಪ್ ಮಹಿಳಾ ನೌಕರೆ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ. ವೈದ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net