

ಕಕಮರಿ: ಧರ್ಮ ಕಾರ್ಯದಲ್ಲಿ ತೊಡಗಿದಾಗ ಜೀವನದ ಕಷ್ಟ ನಿವಾರಣೆಯಾಗಿ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ ಹೇಳಿದರು.
ಗ್ರಾಮದ ಶ್ರೀ ಅಂಭಾಭವಾನಿ ಯೋಗಾಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಡದೇವಿ ನವರಾತ್ರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯ ಜನ್ಮ ಸಾರ್ಥಕಮಾಡಿಕೊಳ್ಳಲು ಗುರು-ಹಿರಿಯರ ಮಾತು ಆಲಿಸಬೇಕು. ಧರ್ಮ ಉಳಿದರೆ ದೇಶಾಭಿಮಾನ ತಾನಾಗಿಯೇ ಮೂಡುತ್ತದೆ. ಜೀವನಕ್ಕೆ ಅರ್ಥ ಬರಬೇಕಾದರೆ ಸತ್ಯ, ಶುದ್ಧ ಕಾಯಕ ಮಾಡಬೇಕು ಎಂದರು.
ಬಿಕೆಎಸ್ ಕರ್ನಾಟಕ ಉತ್ತರ ಪ್ರಾಂತ್ಯದ ಕಾರ್ಯದರ್ಶಿ ಶ್ರೀಶೈಲ ಜನಗೌಡ ಮಾತನಾಡಿದರು. ದೇವಿಯ ಆರಾಧಕ ಎ.ಎಸ್.ಗಡಾಲೋಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಿಕೆಪಿಎಸ್ ಅಧ್ಯಕ್ಷ ಸಿದ್ರಾಮಪ್ಪ ಬಿಳ್ಳೂರ, ಗ್ರಾಪಂ ಸದಸ್ಯ ಈರಣ್ಣ ಕನ್ನಾಳ, ಬಸಪ್ಪ ದುಂಡಿ, ಮಲ್ಲಿಕಾರ್ಜುನ ಕನಮಡಿ, ಮಲ್ಲಿಕಾರ್ಜುನ ದುಂಡಿ, ಮಹಾಂತೇಶ ತಳಕಟ್ಟಿ, ರಮೇಶ ಸಿಂದೂರ, ಈರಯ್ಯ ಮಠಪತಿ, ಶಿವಾನಂದ ಜನಗೌಡ ಇತರರು ಇದ್ದರು. ಉಪನ್ಯಾಸಕ ಮಲ್ಲಿಕಾರ್ಜುನ ಕರಡಿ ಸ್ವಾಗತಿಸಿ ನಿರೂಪಿಸಿದರು.