ಧರ್ಮಸ್ಥಳಕ್ಕೆ ಸೈಕಲ್‌ನಲ್ಲಿ ಹೊರಟ ಯುವಕರು

cycle yatra
ವಿಜಯನಗರ ಜಿಲ್ಲೆಯಿಂದ ಧರ್ಮಸ್ಥಳಕ್ಕೆ ಸೈಕಲ್‌ನಲ್ಲಿ ಯಾತ್ರೆ ಹೊರಟಿರುವ ಯುವಕರ ತಂಡ ಚಿಕ್ಕಮಗಳೂರಿಗೆ ಆಗಮಿಸಿ ದಣಿವಾರಿಸಿಕೊಂಡು ಮತ್ತೆ ಯಾತ್ರೆ ಮುಂದುವರಿಸಿತು.
Published on

ಚಿಕ್ಕಮಗಳೂರು: ಶ್ರಾವಣ ಮಾಸ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ 28ಕ್ಕೂ ಹೆಚ್ಚು ಯುವಕರು ಧರ್ಮಸ್ಥಳಕ್ಕೆ ಸೈಕಲ್‌ನಲ್ಲಿ ಹೊರಟಿದ್ದು ಚಿಕ್ಕಮಗಳೂರಿಗೆ ಬಂದು ಕೆಲಕಾಲ ದಣಿವು ಆರಿಸಿಕೊಂಡರು. ವಿಜಯನಗರದಿಂದ ಧರ್ಮಸ್ಥಳಕ್ಕೆ ಹೊರಟಿರುವ ಯುವಕರು ಒಟ್ಟು ಎಂಟು ದಿನಗಳ ಕಾಲ ಸೈಕಲ್ ಯಾತ್ರೆ ನಡೆಸಲಿದ್ದಾರೆ. ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಸೈಕಲ್‌ನಲ್ಲೇ ಧರ್ಮಸ್ಥಳಕ್ಕೆ ತೆರಳುವುದಾಗಿ ಯುವಕರು ಮಾಹಿತಿ ನೀಡಿದರು. ಸೈಕಲ್‌ನಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿರುವ ಯುವಕರ ತಂಡದಲ್ಲಿ ಮಂಜುನಾಥಸ್ವಾಮಿ, ಕೆ.ಮಂಜುನಾಥ್, ಎನ್.ಮಣಿಕಂಠ, ಯುವರಾಜ್, ಮನೋಜ್, ಗಣೇಶ್, ಸತ್ಯನಾರಾಯಣ್, ರಾಜ್ ನವೀನ್, ಸುದೀಪ್, ಎಸ್.ಉಲಗಪ್ಪ, ಉಮೇಶ್, ಕೀರ್ತಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net