Dhanush​ ಮುಂದಿನ ಸಿನಿಮಾದ ರಿಲೀಸ್​ ಡೇಟ್​ ಫಿಕ್ಸ್​​​; ಪೋಸ್ಟರ್​ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ

Untitled design - 2024-11-08T143957.379
Published on

ಚೆನ್ನೈ: ಕಾಲಿವುಡ್ ನಟ ಧನುಷ್(Dhanush)​​​​​ ಅಭಿನಯದ ಇತ್ತೀಚೆಗೆ ಬಿಡುಗಡೆಗೊಂಡ ಸಿನಿಮಾ ರಾಯನ್​​. ಈ ಸಿನಿಮಾದಲ್ಲಿ ನಾಯಕನಟನಾಗಿ ನಟಿಸುವುದರ ಜತೆಗೆ ಚಿತ್ರದ ನಿರ್ದೇಶನವನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ​​​​ ಕ್ಯಾಪ್ಟನ್ ಮಿಲ್ಲರ್ ಮತ್ತು ರಾಯನ್ ಚಿತ್ರದಂತಹ ಹಿಟ್​​ ಸಿನಿಮಾಗಳನ್ನು ನೀಡಿದ ನಟ ಧನುಷ್​​​​ ಸಾಲು ಸಾಲು ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ.

ಸದ್ಯ ಧನುಷ್​​ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಮತ್ತೊಂದು ಸಿನಿಮಾ 'ಇಡ್ಲಿ ಕಡಾಯಿ'. ಈಗಾಗಲೇ ಧನುಷ್​​​ ಈ ಚಿತ್ರದ ಚಿತ್ರೀಕರಣವನ್ನು ಸೈಲೆಂಟಾಗಿ ಆರಂಭಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ನಿತ್ಯಾ ಮೆನನ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದಾರೆ.

ಈಗಾಗಲೇ ಈ ಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. 2025 ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ 'ಇಡ್ಲಿ ಕಡೈ' ಗ್ರ್ಯಾಂಡ್ ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಪ್ರಸ್ತುತ ಈ ಪೋಸ್ಟರ್ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸುತ್ತಿದೆ.

ಧನುಷ್​ ಕೂಡ ಈ ವಿಚಾರವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಏತನ್ಮಧ್ಯೆ ಏಪ್ರಿಲ್ 10ರಂದು ಅಂದರೆ ಅದೇ ದಿನ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಮಾರುತಿ ಅವರ 'ರಾಜಾ ಸಾಬ್' ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಸ್ಟಾರ್ ಹೀರೋಗಳ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net