

ತಮಿಳುನಾಡು: ಕಾಲಿವುಡ್ನ ಸ್ಟಾರ್ ನಟ ಧನುಷ್ ಅಭಿನಯದ ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಟೀಸರ್ ಅನ್ನು ಅವರ ಜನ್ಮದಿನದಂದೇ ಚಿತ್ರತಂಡ ಬಿಡುಗಡೆಗೊಳಿಸಿದ್ದು, ಇದೀಗ ಟೀಸರ್ ನೋಡಿದ ಸಿನಿಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
40ನೇ ವಸಂತಕ್ಕೆ ಕಾಲಿಟ್ಟ ನಟ ಧನುಷ್ ಅವರ ಜನ್ಮದಿನಕ್ಕೆ ಉಡುಗೊರೆಯಾಗಿ ಚಿತ್ರತಂಡ ಇಂದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಟೀಸರ್ನಲ್ಲಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಧನುಷ್, ಐತಿಹಾಸಿಕ ಕಥೆಯೊಂದನ್ನು ಹೇಳಲು ಹೊರಟಿರುವಂತೆ ಕಾಣುತ್ತದೆ. ರಗಡ್ ಪಾತ್ರದಲ್ಲಿ ಮಿಂಚಿರುವ ಧನುಷ್ ಜತೆಯಲ್ಲಿ ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವುದು ಇದೀಗ ಅಭಿಮಾನಿಗಳಿಗೆ ಸಂತಸ ನೀಡಿದೆ.
ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ಕಂಡ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು, ಧನುಷ್ ಅವರ ಮಾಸ್ ಲುಕ್ಗೆ ಫಿದಾ ಆಗಿದ್ದು, ವಿಡಿಯೋ ಲಿಂಕ್ ಅನ್ನು ಶೇರ್ ಮಾಡುವ ಮುಖೇನ ಧನುಷ್ ಚಿತ್ರಕ್ಕೆ ಮತ್ತು ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).