ಧನುಷ್ ಅಭಿನಯದ 'ರಾಯನ್' ಓಟಿಟಿಯಲ್ಲಿ ಸ್ಟ್ರೀಮ್: ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ..

RAYAN
Published on

ಚೆನ್ನೈ: ಧನುಷ್ ಅಭಿನಯದ 50 ನೇ ಚಿತ್ರ ರಾಯನ್ ಜುಲೈ 26 ರಂದು ತೆರೆಗೆ ಅಪ್ಪಳಿಸಿತ್ತು. ಫ್ಯಾಮಿಲಿ ಎಮೋಷನಲ್ ಮತ್ತು ಆ್ಯಕ್ಷನ್ ಸಿನಿಮಾ ಆಗಿ ಬಂದಿದ್ದ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಗಳಿಸಿದ್ದ ಈ ಚಿತ್ರದ ಓಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದ್ದು, ಆ.23(ಶುಕ್ರವಾರ) ರಾತ್ರಿ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.

ರಾಯನ್ ಆ.23 ಮಧ್ಯರಾತ್ರಿಯಿಂದ ಸ್ಟ್ರೀಮಿಂಗ್ ಆಗಲಿದೆ. ಇದು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿರುವ ರೂ. 100 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ಒಟಿಟಿಯಲ್ಲಿ ಯಾವ ರೇಂಜ್ ರೆಸ್ಪಾನ್ಸ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಟಾಲಿವುಡ್ ಯಂಗ್ ಹೀರೋ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್, ಎಸ್.ಜೆ.ಸೂರ್ಯ, ಸೆಲ್ವ ರಾಘವನ್, ಅಪರ್ಣಾ ಬಾಲಮುರಳಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net