ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಹೊಸ ಡಿಜಿ-ಐಜಿಪಿಯಾಗಿ ನೇಮಕ; ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಇಂದು ನಿವೃತ್ತಿ

Praveen Sood 31 JAN 20
Published on
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಹೊಸ ಡಿಜಿ-ಐಜಿಪಿ ನೇಮಕವಾಗಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿವೃತ್ತಿ ಹಿನ್ನೆಲೆಯಲ್ಲಿ ಸೇವಾ ಹಿರಿತನ ಆಧಾರದ ಮೇಲೆ ಪ್ರವೀಣ್ ಸೂದ್ ನೇಮಕಗೊಂಡಿದ್ದಾರೆ.

ಪ್ರವೀಣ್​ ಸೂದ್​ ಸಿಐಡಿ ಡಿಜಿಪಿಯಾಗಿರುವ ಹಿಮಾಚಲಪ್ರದೇಶ ಮೂಲದ 1986ನೇ ಬ್ಯಾಚ್​ನವರು. ಪ್ರವೀಣ್​ ಸೂದ್​ ಅವರಿಗೆ ನಾಲ್ಕು ವರ್ಷಗಳ ಸೇವಾವಧಿ ಇದೆ.

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ವಿವಾದದ ಬಳಿಕ ರಾಜ್ಯದಲ್ಲಿ ಸೇವಾ ಹಿರಿತನದ ಮೇಲೆಯೇ ಡಿಜಿ-ಐಜಿಪಿ ನೇಮಕ ನಡೆದುಕೊಂಡು ಬಂದಿದೆ. ಈ ಬಾರಿಯೂ ಸೇವಾ ಹಿರಿತನ ಮಾನದಂಡದ ಮೇಲೆ ನೇಮಕಾತಿ ನಡೆದಿದೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪಿ.ಕೆ.ಗರ್ಗ್ ಹೆಸರುಗಳು ಡಿಜಿ-ಐಜಿಪಿ ಪಟ್ಟಿಯಲ್ಲಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net