ಶ್ರೀ ರಾಮ ಸ್ಥಾಪಿಸಿದ್ದ ಈಶ್ವರನ ಆಲಯದಲ್ಲಿ ಏಡಿ ಅರ್ಪಿಸಿದ ಭಕ್ತರು!

crabs
Published on

ಸೂರತ್: ಗುಜರಾತ್‌ನ ಸೂರತ್‌ನಲ್ಲಿರುವ ರಾಮನಾಥ ಶಿವಫೇಲಾ ದೇವಸ್ಥಾನದಲ್ಲಿ ಭಕ್ತರು ಶಿವನಿಗೆ ಏಡಿಗಳನ್ನು ಅರ್ಪಿಸುತ್ತಿದ್ದಾರೆ. ಇಲ್ಲಿ ಏಡಿಯನ್ನು ನೈವೇದ್ಯ ಮಾಡಿದರೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಭಕ್ತ ಫಲ್ಗುಣಿ. ವರ್ಷಕ್ಕೊಮ್ಮೆ ಇಲ್ಲಿ ಏಡಿಯನ್ನು ಅರ್ಪಿಸಲಾಗುತ್ತದೆ. ಇಲ್ಲಿ ಏಡಿಗಳನ್ನು ಅರ್ಪಿಸುವುದರಿಂದ ನಮ್ಮ ಮಕ್ಕಳಿಗೆ ಕಿವಿ ನೋವು ಬರುವುದಿಲ್ಲ ಎಂದು ನಂಬಿದ್ದೇವೆ,'' ಎಂದು ಮತ್ತೊಬ್ಬ ಭಕ್ತ ಪುಷ್ಪಾ ಹೇಳಿದರು.

ದೇವಾಲಯದ ಅರ್ಚಕ ಮನೋಜಗಿರಿ ಗೋಸ್ವಾಮಿ, " ಶ್ರೀ ರಾಮನೇ ಈ ದೇವಾಲಯವನ್ನು ಸ್ಥಾಪಿಸಿದ್ದ. ಏಕಾದಶಿಯ ದಿನದಂದು ಈ ದೇವಾಲಯದಲ್ಲಿ ಏಡಿಗಳನ್ನು ಅರ್ಪಿಸಿದರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ" ಎಂದು ಹೇಳಿದರು. ಹಾಗೆ ಮಾಡುವುದರಿಂದ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ ಎಂದು ಜನರು ನಂಬಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net