ಸಹಕಾರಿ ಬ್ಯಾಂಕ್‌ಗಳಿಂದ ರೈತರ ಅಭಿವೃದ್ಧಿ

11ckm4- mla
ಹಿರೇಮಗಳೂರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಕೇಶವಮೂರ್ತಿ, ನಿರಂಜನ್, ಯೋಗೀಶ್, ಜಯಲಕ್ಷ್ಮೀ ಇದ್ದರು.
Published on

ಚಿಕ್ಕಮಗಳೂರು: ಸಹಕಾರಿ ಬ್ಯಾಂಕ್‌ಗಳಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಂಡಾಗ ಸಬಲೀಕರಣ ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಹಿರೇಮಗಳೂರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ದೊರೆಯುವುದಿಲ್ಲ. ಸಹಕಾರಿ ಬ್ಯಾಂಕ್‌ಗಳಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸಹಕಾರಿ ಸಂಘದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆಡಳಿತ ಮಂಡಳಿ ರಾಜಕೀಯ ಮಾಡದೆ ರೈತರಿಗೆ ಪ್ರಮಾಣಿಕವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗ ಸಹಕಾರ ಸಂಘದ ಮೇಲೆ ನಂಬಿಕೆಯಿಟ್ಟು ಮರುಪಾತಿ ಮಾಡುತ್ತಾರೆ. ರೈತರು ಪಡೆದ ಸಾಲವನ್ನು ಪ್ರಮಾಣಿಕವಾಗಿ ಬ್ಯಾಂಕ್‌ಗೆ ಮರುಪಾವತಿ ಮಾಡುವ ಮೂಲಕ ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕರಿಸಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ನಿರಂಜನ್ ಮಾತನಾಡಿ, ಸಹಕಾರಿ ಸಂಘಗಳು ರಾಜಕೀಯ ಹಸ್ತಾಕ್ಷೇಪ ಮಾಡದೇ ರೈತರ ಅಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಸಂಘದ ಏಳಿಗೆಗೆ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸಿ ಸಹಕರಿಸಬೇಕು ಎಂದರು.
ಸಂಘದ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿ, ಸಂಘದ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ದರಸ್ತಿಗೆ ಶಾಸಕರ ನಿಧಿಯಿಂದ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ನಿರ್ದೇಶಕರಾದ ಎಚ್.ಕೆ.ಕೇಶವಮೂರ್ತಿ, ಎಂ.ಜಗದೀಶ್, ಗಂಗಮ್ಮ, ಎಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಎಚ್.ಸಿ.ಗಂಗಾಧರ್, ಮಲ್ಲುಂಡಪ್ಪ, ನೀಲಶೆಟ್ಟಿ, ಸತೀಶ್, ಜಯಲಕ್ಷ್ಮೀ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ಜಿ.ಆಶ್ರಿಕ್, ಗಂಗಾಧರ್, ಮುಖಂಡರಾದ ಬಸವರಾಜ್, ಎಚ್.ಪಿ.ಮಂಜೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net