ಹಣ ಕೊರತೆಯಿಂದ ಅಭಿವೃದ್ಧಿ ಕುಂಠಿತ

klr jds
ಕೋಲಾರ ತಾಲೂಕು ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯೆ ವರಲಕ್ಷಿ$್ಮ, ಉಪಾಧ್ಯೆ ಪಾರ್ವತಮ್ಮ ಅವರನ್ನು ಸಿಎಂಆರ್​ ಕಚೇರಿಯಲ್ಲಿ ಜೆಡಿಎಸ್​ ಮುಖಂಡರು ಅಭಿನಂಧಿಸಿದರು. ಸಿಎಂಆರ್​ ಶ್ರೀನಾಥ್​, ನಟರಾಜ್​, ಮಂಜುನಾಥ್​, ಶ್ರೀನಿವಾಸಪ್ಪ ಇದ್ದರು.
Published on

ಕೋಲಾರ: ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿದೆ. ಆದ್ದರಿಂದ ರಾಜ್ಯದ ಗ್ರಾಮೀಣ ಭಾಗದಿಂದಲೇ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಆರೋಪಿಸಿದರು.

ತಾಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ&ಉಪಾಧ್ಯಕ್ಷರನ್ನು ಮಂಗಳವಾರ ಅಭಿನಂದಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣ ಕೇಂದ್ರಗಳಾಗಿರುವ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಅನುದಾನ ಕೊಡದೆ ಸತಾಯಿಸುತ್ತಿದೆ ಎಂದರು.

ರಾಜ್ಯ ಸರ್ಕಾರದ ಐದು ಯೋಜನೆಗಳು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಾರಕವಾಗಿದೆ. ಇನ್ನೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನವಿಲ್ಲ, ಕಾಂಗ್ರೆಸ್​ ಶಾಸಕರು ಭೂಮಿಪೂಜೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ಮಾಡುವಲ್ಲಿಯೂ ಸಹ ವಿಫಲವಾಗಿದ್ದಾರೆ ಎಂದರು.

ಜಿಲ್ಲೆಯಲ್ಲೆ ಬೇಸಿಗೆಕಾಲ ಪ್ರಾರಂಭವಾಗಿದ್ದು, ನಾನಾ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಲು ರೈತರಿಗೆ ಸುಗ್ಗಿ ಕಾಲ ಒಂದು ಕಡೆಯಾದರೆ, ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಾಗಲೇ ಬೆಸ್ಕಾಂ ಅವರು ಲೋಡ್​ ಶೆಡ್ಡಿಂಗ್​ ಮಾಡಲು ಮುಂದಾಗಿದ್ದಾರೆ. ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಎಪಿಎಂಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್​ಗೆ ಮೈತ್ರಿಯ ಶಕ್ತಿ ತೋರಿಸಲು ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.

ಬೆಗ್ಲಿಹೊಸಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷರ ವಿರುದ್ಧ ಸದಸ್ಯರು ಮಂಡನೆ ಮಾಡಿದ ಆವಿಶ್ವಾಸ ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿಗೆ ಗೆಲುವು ಆಗಿದೆ. ಅಧ್ಯಕ್ಷೆಯಾಗಿ ವರಲಕ್ಷಿ$್ಮ ಮತ್ತು ಉಪಾಧ್ಯಕ್ಷೆಯಾಗಿ ಪಾರ್ವತಮ್ಮಆಯ್ಕೆಯಾಗಿದ್ದು, ಇತರೆ ಸದಸ್ಯರು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸದಸ್ಯರಾದ ಎಸ್​. ನಾರಾಯಣಸ್ವಾಮಿ, ಭಾಗ್ಯಮ್ಮ, ನಾರಾಯಣಮ್ಮ, ರಘು, ಸರಸ್ವತಿ, ಆರ್​.ಮಂಜುನಾಥ್​, ಮಂಗಳಾ, ಶ್ರೀನಿವಾಸಪ್ಪ, ನಾಗೇಶ್​, ಲಕ್ಷಿ$್ಮದೇವಮ್ಮ, ಚರಣ್​ರಾಜ್​, ಶ್ರೀನಿವಾಸಪ್ಪ, ಚಂದನಾ, ಮುಖಂಡರಾದ ನಟರಾಜ್​, ಮುನಿಯಪ್ಪ, ಬಿ.ಎಂ.ಮಂಜುನಾಥ್​, ಬೆಗ್ಲಿ ಹೊಸಹಳ್ಳಿ ವೆಂಕಟೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net