ತಾಪಮಾನ ಏರಿಕೆಗೆ ಕಳವಳ: ಕೊನೇ ದಿನ ಹವಾಮಾನ ವೈಪರೀತ್ಯದ್ದೇ ಸದ್ದು

modi
Published on

ರೋಮ್​: ಜಗತ್ತಿನ ದೊಡ್ಡ ಅರ್ಥವ್ಯವಸ್ಥೆಯ ನಾಯಕರು ಜಿ-20 ಶೃಂಗದ ಎರಡನೇ ಮತ್ತು ಕೊನೆಯ ದಿನ ಹವಾಮಾನ ವೈಪರೀತ್ಯದ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಾತನಾಡಿದರು. ಸ್ಕಾಟ್ಲೆಂಡ್​ನ ಗ್ಲಾಸ್ಗೋವ್​ನಲ್ಲಿ ಸಿಒಪಿ 26 ಶೃಂಗ ಶುರುವಾಗಿದ್ದು, ಮುಂದಿನ ಎರಡು ವಾರಗಳ ವಿವಿಧ ರಾಷ್ಟ್ರಗಳ ನಾಯಕರು ಹವಾಮಾನ ವೈಪರೀತ್ಯ ತಡೆಗೆ ತೆಗೆದುಕೊಂಡ ಕ್ರಮಗಳ ವಿವರವನ್ನು ಜಗತ್ತಿನೆದುರು ಪ್ರಸ್ತುತಪಡಿಸಲಿದ್ದಾರೆ. ಜಗತ್ತಿನ ಹಸಿರು ಅನಿಲ ಹೊರಸೂಸುವಿಕೆಯ ನಾಲ್ಕನೇ ಮೂರಂಶದಷ್ಟು ಹೊಂದಿರುವ ಜಿ&20 ರಾಷ್ಟ್ರಗಳು, ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಬಡ ರಾಷ್ಟ್ರಗಳಿಗೆ ನೆರವಾಗುತ್ತ, ತಮ್ಮ ದೇಶಗಳಲ್ಲಿ ಮಾಲಿನ್ಯ ತಡೆಗೆ ಹೇಗೆ ಎಲ್ಲರಿಗೂ ಹೊಂದುವಂತಹ ಕ್ರಮ ತೆಗೆದುಕೊಳ್ಳುವುದು ಎಂಬ ಬಗ್ಗೆ ಚಿಂತನೆ ನಡೆಸಿವೆ.

ಜಿ-20 ಶೃಂಗದಲ್ಲಿ ಬಹುರಾಷ್ಟ್ರೀಯ ಕಾರ್ಪೊರೇಟ್​ ಕಂಪನಿಗಳಿಗೆ ಶೇ.15 ಗ್ಲೋಬಲ್​ ಮಿನಿಮಂ ಟ್ಯಾಕ್ಸ್​ ವಿಧಿಸುವ ವಿಚಾರ, ವಿದ್ಯುತ್​ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡುವುದು, ಹಸಿರು ಅನಿಲ ಹೊರಸೂಸುವಿಕೆ ಕಡಿಮೆ ಮಾಡುವುದು ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಿವೆ.
ಕಲ್ಲಿದ್ದಲು ಆಧಾರಿತ ವಿದ್ಯುತ್​ ಉತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲು ನಿರ್ಧಾರ ಮಾಡಿದೆ. ಚೀನಾ ಕೂಡ ಕಲ್ಲಿದ್ದಲು ಯೋಜನೆಗೆ ನೆರವು ಕೊನೆಗೊಳಿಸುವುದಾಗಿ ಘೋಷಿಸಿದೆ. ಜಪಾನ್​, ದಣ ಕೊರಿಯಾಗಳು ಕೂಡ ಈ ಕುರಿತು ಬದ್ಧತೆಯನ್ನು ತೋರಿಸಿವೆ. ಆದಾಗ್ಯೂ, ಸ್ವದೇಶದಲ್ಲಿ ಕಲ್ಲಿದ್ದಲು ಯೋಜನೆ ಕೊನೆಗೊಳಿಸಲು ಡೆಡ್​ಲೈನ್​ ಹಾಕಿಕೊಂಡಿಲ್ಲ. ವಿದ್ಯುತ್​ ಉತ್ಪಾದನೆಗೆ ಚೀನಾ ಕಲ್ಲಿದ್ದಲು ಟಕಗಳನ್ನೇ ಮುಖ್ಯ ಮೂಲವಾಗಿ ನಂಬಿಕೊಂಡಿದೆ. ಭಾರತದಲ್ಲೂ ಅಷ್ಟೆ ವಿದ್ಯುತ್​ ಉತ್ಪಾದನೆಯ ಪ್ರಮುಖ ಟಕಗಳು ಕಲ್ಲಿದ್ದಲು ಟಕಗಳೇ ಆಗಿವೆ.

ಚೀನಾ ಸೇರಿ ಪ್ರಮುಖ ರಾಷ್ಟ್ರಗಳು ಕಲ್ಲಿದ್ದಲು ಯೋಜನೆ ಸ್ಥಗಿತಗೊಳಿಸುವ ವಿಚಾರದಲ್ಲಿ ಬದ್ಧತೆ ತೋರಿಸಬೇಕು. ಗ್ಲಾಸ್ಗೋವ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಪರಿಸರ ಸ್ನೇಹಿ ಇಂಧನ ಬಳಕೆ ಕಡೆಗೆ ಗಮನಹರಿಸಬೇಕು.| ಬೋರಿಸ್​ ಜಾನ್ಸನ್​ ಬ್ರಿಟನ್​ ಪ್ರಧಾನಿ

2030ಕ್ಕೆ 1.5 ಡಿಗ್ರಿ ಸೆಲ್ಷಿಯಸ್​
ತಾಪಮಾನವನ್ನು 1.5 ಡಿಗ್ರಿ ಸೆಲ್ಷಿಯಸ್​ಗೆ ಮಿತಿಗೊಳಿಸಲು 2015ರ ಪ್ಯಾರಿಸ್​ ಸಮ್ಮೇಳನದಲ್ಲಿ ಜಾಗತಿಕ ನಾಯಕರು ಸಮ್ಮತಿಸಿದ್ದರು. ಇದರ ಪರಾಮರ್ಶೆ ಈ ಸಿಒಪಿ 26 ಶೃಂಗದಲ್ಲಿ ನಡೆಯಲಿದೆ. ಕಳೆದ ಒಂದೂವರೆ ಶತಮಾನದಲ್ಲೇ ಇಳೆ 1.1 ಡಿಗ್ರಿ ಸೆಲ್ಷಿಯಸ್​ನಷ್ಟು ಬಿಸಿಯಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡರೆ 2030ರ ವೇಳೆಗೆ 1.5 ಡಿಗ್ರಿ ಸೆಲ್ಷಿಯಸ್​ ಮಿತಿ ದಾಟಲಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

5 ದೇಶ ಬದ್ಧತೆ ತೋರಬೇಕು
ಚೀನಾ, ಆಸ್ಟ್ರೆಲಿಯಾ, ರಷ್ಯಾ, ಜಪಾನ್​ ಮತ್ತು ಭಾರತಗಳು ಹವಾಮಾನ ವೈಪರೀತ್ಯ ತಡೆಗೆ ಸಂಬಂಧಿಸಿ ಬದ್ಧತೆಯನ್ನು ತೋರಿಸಬೇಕು. ಪ್ರತಿರೋಧದ ಭಾಷೆಯನ್ನು ಬಿಟ್ಟು ಪ್ಯಾರಿಸ್​ ಒಪ್ಪಂದ ಅಂಶಗಳಿಗೆ ಅನುಗುಣವಾಗಿ ಕ್ರಮಗಳನ್ನು ನಿಶ್ಚಿತ ಗಡುವಿನೊಳಗೆ ಜಾರಿಗೊಳಿಸಬೇಕು ಎಂದು ಐರೋಪ್ಯ ಒಕ್ಕೂಟ ಆಗ್ರಹಿಸಿದೆ.

ಸಿಒಪಿ-26 ವಿಶೇಷ
ದ 26 ಕಾನ್ಫರೆನ್ಸ್​ ಆ್​ ಪಾರ್ಟೀಸ್​ ಟು ದ ಯುಎನ್​ ್ರೇಮ್​ವರ್ಕ್​ ಕನ್ವೆನ್ಶನ್​ ಆನ್​ ಕ್ಲೆಮ್ಯಾಟ್​ ಚೇಂಜ್​ (ಸಿಒಪಿ26) ಶೃಂಗ ಗ್ಲಾಸ್ಗೋವ್​ನಲ್ಲಿ ಅಕ್ಟೋಬರ್​ 31ರಿಂದ ನವೆಂಬರ್​ 12ರ ತನಕ ನಡೆಯಲಿದೆ. 2015ರ ಪ್ಯಾರಿಸ್​ ಒಪ್ಪಂದದಲ್ಲಿ ಉಲ್ಲೇಖ ವಾಗಿರುವ ಅಂಶಗಳ ವಿಶೇಷವಾಗಿ ನಿಯಮ ಮತ್ತು ಕ್ರಮಗಳ ಅನುಷ್ಠಾನವನ್ನು ಅಂತಿಮಗೊಳಿಸುವುದು ಈ ಶೃಂಗದ ಉದ್ದೇಶ.

ಭಾರತದ ಕ್ರಿಯಾಯೋಜನೆ
* ರಾಷ್ಟ್ರೀಯ ಸೌರ ಯೋಜನೆ ? ರಾಷ್ಟ್ರೀಯ ಸುಧಾರಿತ ಇಂಧನ ಸಕ್ಷಮತೆಯ ಯೋಜನೆ 

* ರಾಷ್ಟ್ರೀಯ ಸುಸ್ಥಿರ ವಸತಿ ಪ್ರದೇಶ ಯೋಜನೆ ? ರಾಷ್ಟ್ರೀಯ ಜಲ ನೀತಿ

* ಹಿಮಾಲಯ ಪರಿಸರದ ಸುಸ್ಥಿರತಗಾಗಿರುವ ರಾಷ್ಟ್ರೀಯ ಯೋಜನೆ 

* ಗ್ರೀನ್​ ಇಂಡಿಯಾ & ರಾಷ್ಟ್ರೀಯ ಯೋಜನೆ 

* ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ 

* ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ವ್ಯೂಹಾತ್ಮಕ ಜ್ಞಾನದ ರಾಷ್ಟ್ರೀಯ ಯೋಜನೆ

* ಕರಾವಳಿ ಸಂಪನ್ಮೂಲ ಸಂರಕ್ಷಣೆಗೆ ಕ್ರಮ

* ಮಾನವ ಆರೋಗ್ಯ ಸಂರಕ್ಷಣೆಗೆ ಸೂತ್ರ 

* ತ್ಯಾಜ್ಯದಿಂದ ಪರಿಸರ ಸ್ನೇಹಿ ಇಂಧನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net