

ವಿಜಯಪುರ: ಶಿಕ ವೃತ್ತಿ ಒಂದು ಕಲೆಯಿದ್ದಂತೆ. ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಮೂಡಿಸಿ ಸುಸಂಸತ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕರ ಮೇಲಿದೆ ಎಂದು ಪ್ರಭಾರ ಡಿಡಿಪಿಐ ಉಮಾದೇವಿ ಸೊನ್ನದ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಜೆಎಸ್ಎಸ್ ಶಿಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ 44 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ಮಗುವಾಗಿ ಕಳುಹಿಸುತ್ತಾರೆ. ಅವರನ್ನು ಮಾಸ್ಟರ್ ಆಗಿ ತಯಾರಿಮಾಡಿ ಕಳುಹಿಸುವುದು ಶಿಕ ಮೇಲಿದೆ. ಶ್ರಮದಾಯಕವಾಗಿರುವ ಈ ಕೆಲಸವನ್ನು ಶಿಕರು ಇಂದಿನ ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಮಕ್ಕಳನ್ನು ಸಿದ್ಧಪಡಿಸಬೇಕು. ಮಕ್ಕಳು ಪೋಷಕರಿಗಿಂತ ಶಿಕರ ಮಾತಿಗೆ ಹೆಚ್ಚಿನ ಬೆಲೆ ನೀಡುತ್ತಾರೆ ಎಂದು ಅವರು ಹೇಳಿದರು.
ಸಂಸ್ಥೆಯ ಆಡಳಿತಾಕಾರಿ ಪ್ರೊ. ವಿ.ಎಸ್. ಬಗಲಿ ಮಾತನಾಡಿ, ಶಿಣ ಮಕ್ಕಳನ್ನು ಸಂಸ್ಕಾರವಂತರಾಗಿ ಮಾಡುತ್ತದೆ. ಶಿಕರು ಮಕ್ಕಳ ಎರಡನೇ ತಾಯಿ&ತಂದೆ ಇದ್ದಂತೆ. ಹೀಗಾಗಿ, ಶಿಕರು ಮಕ್ಕಳಿಗೆ ಶಿಣದ ಜತೆಗೆ ಅವರಲ್ಲಿರುವ ಪಠ್ಯೇತರ ಚಟುವಟಿಕೆಗಳಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಆಡಳಿತಾಕಾರಿ ಐ.ಎಸ್. ಕಾಳಪ್ಪನವರ, ಪ್ರಾಚಾರ್ಯ ಡಾ. ಬಿ.ವೈ. ಖಾಸನೀಸ, ಡಾ. ಎಂ.ಎಸ್. ಹಿರೇಮಠ, ಬಸವರಾಜ ನಾವಿ, ಬೋಧಕ, ಬೋಧಕರ ಸಿಬ್ಬಂದಿ, ಪ್ರಶಿಣಾರ್ಥಿಗಳು ಮತ್ತಿತರರಿದ್ದರು.