

ರಾಣೆಬೆನ್ನೂರ: ತಾಲೂಕಿನ ಶ್ರೀಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ದಸರಾ ಮಹೋತ್ಸವ ಮತ್ತು ಕಾಣಿರ್ಕೋತ್ಸವ ಧಾಮಿರ್ಕ ಕಾರ್ಯಕ್ರಮಗಳು ಸೆ. 22ರಿಂದ ಅ. 15ರವರೆಗೆ ಶ್ರದ್ಧಾ ಭಕ್ತಿಯಿಂದ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ತಿಳಿಸಿದರು.
ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 22ರಂದು ಟಸ್ಥಾಪನೆ, ಸೆ. 30ರಂದು ದುರ್ಗಾಷ್ಟಮಿ, ಅ. 1ರಂದು ಮಹಾನವಮಿ ಆಚರಣೆ ಹಾಗೂ ಸಂಜೆ 4 ಗಂಟೆಗೆ ಕಾಣಿರ್ಕ ಅಜ್ಜನವರಿಂದ ಕಾಣಿರ್ಕೋತ್ಸವ ಜರುಗಲಿದೆ.
ಅ. 2ರಂದು ಸಂಜೆ 4 ಗಂಟೆಗೆ ವಿಜಯದಶಮಿ, ಕಂಚಾವೀರರಿಂದ ಶಸ್ತ್ರಪವಾಡ, ಗೊರವಯ್ಯನವರಿಂದ ಸರಪಳಿ ಪವಾಡ ಹಾಗೂ ಸಂಜೆ 6 ಗಂಟೆಗೆ ಶ್ರೀ ಮಾಲತೇಶ ಸ್ವಾಮಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಅ. 7ರಂದು ಶೀಗಿಹುಣ್ಣಿಮೆ ಆಚರಣೆ, ಅ. 15ರಂದು ಕುದುರೆಹಬ್ಬದ ಮೂಲಕ ಮಾಲತೇಶ ಸ್ವಾಮಿ ದಸರಾ ಮಹೋತ್ಸವ ಸಮಾಪ್ತಿಗೊಳ್ಳುವುದು ಎಂದರು.
ಈ ಬಾರಿ ದೇವಸ್ಥಾನದಲ್ಲಿ ನ್ಯಾಯಾಲಯದಿಂದ ನೂತನ ಆಡಳಿತ ಮಂಡಳಿ ರಚನೆ ಮಾಡಲಾಗಿದ್ದು, ದೇವರಗುಡ್ಡ ಸಮಗ್ರ ಅಭಿವೃದ್ದಿ ಹಾಗೂ ಬರುವ ಭಕ್ತರಿಂದ ಮೂಲಸೌಕರ್ಯ ಕಲ್ಪಿಸಲು ನಮ್ಮ ಮೊದಲ ಆಧ್ಯತೆ ಆಗಿದೆ. ಈಗಾಗಲೇ ದೇವಸ್ಥಾನ ಆವರಣದಲ್ಲಿ ಅನೇಕ ಕಾಮಗಾರಿ ಪ್ರಾರಂಭಿಸಿದ್ದು ಮುಂದಿನ ದಿನದಲ್ಲಿ ಉತ್ತಮ ರೀತಿಯ ಧಾಮಿರ್ಕ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.
ಹಿರಿಯ ವಕೀಲ ಶರಣಬಸವ ಅಂಗಡಿ, ಭರಮಪ್ಪ ಊಮಿರ್, ನಾಗರಾಜ ತಳಗೇರಿ, ಸುಭಾಸ ಕೆಂಗಲ್, ಪವನ ಪೂಜಾರ, ಪ್ರಕಾಶ ಬಳ್ಳಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.