ಸಾಮಾಜಿಕ ಪರಿವರ್ತನೆ ಹರಿಕಾರ ದೇವರಾಜ ಅರಸು

20 TKE 1
ತರೀಕೆರೆಯಲ್ಲಿ ದೇವರಾಜ ಅರಸು ಜಯಂತಿ ಸಮಾರಂಭವನ್ನು ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ ಉದ್ಘಾಟಿಸಿದರು. ಜಿ.ಎಚ್.ಶ್ರೀನಿವಾಸ್, ಡಾ. ಕೆ.ಜೆ.ಕಾಂತರಾಜ್, ಕಮಲಾ, ರಿಹಾನಾ ಪರ್ವೀನ್ ಇತರರಿದ್ದರು.
Published on

ತರೀಕೆರೆ: ದೇವರಾಜ ಅರಸು ಸಾಮಾಜಿಕ ಪರಿವರ್ತನೆ ಹರಿಕಾರ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆಯ ಜನರ ಅಭ್ಯುದಯಕ್ಕೆ ಶ್ರಮಿಸಿದ ದೇವರಾಜ ಅರಸು ಕಾರ್ಯ ಸ್ಮರಣೀಯ ಎಂದರು.
ಎಸಿ ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ದೇವರಾಜ ಅರಸು ರಾಜಕಾರಣಿ ಮಾತ್ರವಲ್ಲ, ಅದ್ವಿತೀಯ ಸಮಾಜ ಸುಧಾರಕ. ಅಸಮಾನತೆ ತೊಡೆದುಹಾಕಲು ಹಿಂದುಳಿದ ಆಯೋಗ ರಚಿಸಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಪುರಸಭೆ ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷೆ ರಿಹಾನಾ ಪರ್ವೀನ್, ತಹಸೀಲ್ದಾರ್ ವಿ.ಎಸ್.ರಾಜೀವ್, ತಾಪಂ ಇಒ ಎಸ್.ಗೀತಾ, ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net