ಸ್ವಾಭಿಮಾನದ ಬದುಕಿಗೆ ದೇವಾಂಗ ಸಮಾಜ ಸಾಕ್ಷಿ

devanga samaja programme
ಶಿವಮೊಗ್ಗದಲ್ಲಿ ದೇವಾಂಗ ಸಮಾಜದ ಸುವರ್ಣ ಮಹೋತ್ಸವದಲ್ಲಿ ದೇವರದಾಸಿಮಯ್ಯ ಸಭಾಭವವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
Published on

ಶಿವಮೊಗ್ಗ: ಸ್ವಾಭಿಮಾನದ ಬದುಕಿಗೆ ದೇವಾಂಗ ಸಮಾಜ ಸಾಕ್ಷಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ಮಲೆನಾಡು ದೇವಾಂಗ ಸಮಾಜದ ದೇವರ ದಾಸಿಮಯ್ಯ ಸಭಾಭವನ ಮತ್ತು ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಭಾಭವನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಹೆಚ್ಚಾಗಿರುವ ದೇವಾಂಗ ಸಮಾಜದವರು ಸ್ವಾಭಿಮಾನದ ಬದುಕಿಗೆ ಹೆಸರಾಗಿದ್ದಾರೆ. ರೇಷ್ಮೆ, ಹತ್ತಿ, ಜವಳಿ ಉದ್ಯಮಕ್ಕೆ ಆದ್ಯತೆ ಕೊಟ್ಟು ಸಮಾಜದ ಉಳಿವಿಗೆ ಹೋರಾಟ ನಡೆಸುತ್ತಿದ್ದಾರೆ. ಆ ಮೂಲಕ ಸನಾತನ ಧರ್ಮ, ಪರಂಪರೆ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದರು.

ವಿಶೇಷವಾಗಿ ಜೀವನಕ್ಕೆ ಬೇಕಾದ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಆರ್ಥಿಕ ನೆರವು ಸೇರಿ ಸಮಾಜಮುಖಿ ಕಾರ್ಯಗಳಿಗೆ ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಅರುಣ್ ವರಾಡೆ, ಕೆ.ಆರ್.ಶ್ರೀನಿವಾಸ್,ಡಾ. ಸಿ.ವಾಸುದೇವಪ್ಪ, ಬಿ.ಆರ್.ಯೋಗೀಶ್, ಅರೇಕಲ್ ಆರ್.ಪ್ರಕಾಶ್, ಯು.ರಾಮಪ್ಪ, ಕೆ.ಬಿ.ಭಾಸ್ಕರಯ್ಯ, ಟಿ.ರಾಜೇಶ್, ಕೆ.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net