ಸಮಾಜಪರ ಚಿಂತನೆ ಮಾಡುವವರಿಗೆ ಮುಖಂಡತ್ವ ವಹಿಸಿ; ಡಾ. ರಂಗನಾಥ

12-RNR-07
Published on

ರಾಣೆಬೆನ್ನೂರ: ನಿಷ್ಕಳಂಕ, ನಿಸ್ವಾರ್ಥ, ಸಮಾಜಪರ ಚಿಂತನೆ ಮಾಡುವವರು ಸಮಾಜದ ಮುಖಂಡತ್ವ ವಹಿಸಿದರೆ ಸಮಾಜ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ದೇವಾಂಗ ಸಂಘದ ರಾಜ್ಯ ಪ್ರಧಾನ ಕಾರ್ಯದಶಿರ್ ಡಾ. ಎಸ್​. ರಂಗನಾಥ ಹೇಳಿದರು.

ನಗರದ ರಾಮಲಿಂಗ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾವೇರಿ ಜಿಲ್ಲಾ ದೇವಾಂಗ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಹೆಸರು ಬಳಸಿಕೊಂಡು ಸಾರ್ವಜನಿಕವಾಗಿ ಬೆಳೆದವರು, ಬಡವರು, ಮಧ್ಯಮ ವರ್ಗದವರು ಹೀಗೆ ಸಮಾಜದಲ್ಲಿ ಇರುವ ಮೂರು ಬಗೆಯ ಜನರ ವಿವಿಧ ಮನಸ್ಥಿತಿಯ ದೂರು ದುಮ್ಮಾನಗಳನ್ನ ಹಾಗೂ ಅಡೆತಡೆಗಳೆಲ್ಲವನ್ನ ಎದುರಿಸಿ ಸಮಾಜದ ಸಂಘಟನೆ ಮಾಡಬೇಕು. ಇದು ಸಂಘಟನೆಯ ಮುಂಚೂಣಿಯಲ್ಲಿರುವವರಿಗೆ ಸವಾಲಾಗಿರುತ್ತದೆ ಎಂದರು.

ಜಿಲ್ಲಾಧ್ಯಕ್ಷ ಬಸವರಾಜ ಮೈಲಾರ, ಪ್ರದಾನ ಕಾರ್ಯದಶಿರ್ ಗಣೇಶ ಸಾಲಗೇರಿ ಸೇರಿ 29 ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುಗಿರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಲೆ$್ಮಶ್ವರ, ದಶರಥ ಕೊಳ್ಳಿ, ಶಾರದಾ ಆನ್ವೇರಿ, ಲಕ್ಷಿ$್ಮಕಾಂತ ಹುಲಗೂರ, ಸತ್ಯನಾರಾಯಣ ದುರಗೆರೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net