ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಹೃದಯಾಘಾತದಿಂದ ಸಾವು

Devanahalli police headconstable Virupaksha Gowda
Published on

ದೇವನಹಳ್ಳಿ: ರಾತ್ರಿ ಪಾಳಯದ ಕೆಲಸ ಮುಗಿಸಿ ಇಂದು(ಬುಧವಾರ) ಬೆಳಗ್ಗೆ ಮನೆಗೆ ಬಂದ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ವೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಸಂಭವಿಸಿದೆ.

ಹೆಬ್ಬಾಳ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್ ವಿರೂಪಾಕ್ಷ ಗೌಡಶ್ರೀ(39) ಮೃತರು. ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳಿದ್ದ ವಿರೂಪಾಕ್ಷ ಗೌಡರು, ಬುಧವಾರ ಬೆಳಗ್ಗೆ ಮನೆಗೆ ಆಗಮಿಸಿದ್ದರು. ಬಂದ ಕೆಲವೇ ಕ್ಷಣದಲ್ಲಿ ಎದೆನೋವಿನಿಂದ ಮನೆಯ ಹಾಲ್​ನಲ್ಲೇ ಕುಸಿದು ಬಿದ್ದರು.

ಕೂಡಲೇ ಕುಟುಂಬಸ್ಥರು ವಿರೂಪಾಕ್ಷ ಗೌಡರನ್ನು ಆಸ್ವತ್ರೆಗೆ ಕರೆದೊಯ್ದರಾದರು ಪ್ರಯೋಜನವಾಗಲಿಲ್ಲ. ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net