

ದೇವನಹಳ್ಳಿ: ಬೆಂಗಳೂರಿನಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಟೋಲ್ ದರ ಹೆಚ್ಚಳವಾಗಿದೆ. ವಿಮಾನ ನಿಲ್ದಾಣ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರೈವೇಟ್ ಲಿಮಿಟೆಡ್ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಿದೆ.
ಕಾರು, ಜೀಪು, ವ್ಯಾನ್ ಲಘು ಮೋಟಾರು ವಾಹನ ಏಕಮುಖ ಸಂಚಾರ 110 ರೂಪಾಯಿಗೆ ನಿಗದಿ ಮಾಡಲಾಗಿದ್ದು, 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ 170 ರೂಪಾಯಿಗೆ ನಿಗದಿಯಾಗಿದೆ. ಈ ಮೊದಲು ಏಕಮುಖ ಸಂಚಾರ 105 ಹಾಗೂ ದ್ವಿಮುಖ ಸಂಚಾರ 165 ರೂಪಾಯಿ ಇತ್ತು.
3555 ರೂಪಾಯಿಯಿದ್ದ ಮಾಸಿಕ ಪಾಸ್ ಶುಲ್ಕ 3755 ರೂಪಾಯಿಗೆ ಏರಿಕೆಯಾಗಿದೆ. ಲಘು ವಾಣಿಜ್ಯ ವಾಹನ ಲಘು ಸರಕು ವಾಹನ, ಮಿನಿ ಬಸ್ ಏಕಮುಖ ಸಂಚಾರ 165 ರಿಂದ 170 ರೂಪಾಯಿಗೆ ಏರಿಕೆಯಾಗಿದೆ. ಹಿಂತಿರುಗುವ ಶುಲ್ಕ 245 ರಿಂದ 260 ರೂಪಾಯಿಗೆ ಹೆಚ್ಚಳವಾಗಿದೆ. ಮಾಸಿಕ ಪಾಸ್ ದರ 5465 ರೂಪಾಯಿಂದ 5745 ರೂಪಾಯಿ ಗೆ ಏರಿಕೆ ಮಾಡಿದೆ.
10990 ರೂಪಾಯಿ ಇದ್ದ ಮಾಸಿಕ ಪಾಸ್ 11550 ರೂಪಾಯಿಗೆ ಏರಿಕೆಯಾಗಿದೆ. 16680 ರ ಮಾಸಿಕ ಪಾಸ್ 17525 ರೂಪಾಯಿ ಗೆ ಏರಿಕೆಯಾಗಿದೆ. ಸ್ಥಳೀಯ ಮಾಸಿಕ ಪಾಸ್ 315 ರಿಂದ 330 ರೂಪಾಯಿಗೆ (ಕಾರುಗಳಿಗೆ ಮಾತ್ರ ಅನ್ವಯ) ಹೆಚ್ಚಳವಾಗಿದೆ.