ಕೊಪ್ಪರ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಖನ್ನ; ಸುಮಾರು 1.84 ಲಕ್ಷ ರೂ. ಮೌಲ್ಯದ ವಸ್ತುಗಳ ಕಳ್ಳತನ

06012021 Devadurga koppara Lakshmi Narasimha temple thief
Published on

ದೇವದುರ್ಗ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದೆ.

ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಸುಮಾರು 1.84 ಲಕ್ಷ ರೂ. ಮೌಲ್ಯದ ಸುಮಾರು 4.35 ಕೆ.ಜಿಯಷ್ಟು ಬೆಳ್ಳಿಯ ವಿವಿಧ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಸಾಲಿಗ್ರಾಮ ಮೂರ್ತಿ, ಬೆಳ್ಳಿ ಹಾರ, ಕಂಡಿ ಸರ, ಬೆಳ್ಳಿ ಕಿರಿಟ, 9 ಬೆಳ್ಳಿಯ ನಾಮಗಳು, ಕಳ್ಳತನವಾಗಿವೆ.

ವಿಷಯ ತಿಳಿದು ಪಟ್ಟಣದ ಠಾಣೆ ಪಿ.ಎಸ್.ಐ ಕೆ ರಂಗಯ್ಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net