

2. ಮೂಲಸೌಕರ್ಯ-ಆತ್ಮನಿರ್ಭರ ಭಾರತದ ಸಂಕಲ್ಪ ಸಾಕಾರಕ್ಕಾಗಿ ಹೆಚ್ಚಿನ ಅನುದಾನ ನಿರೀಕ್ಷೆ, ಬಹುತೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.60 ಪಾಲು ನೀಡಬಹುದೆನ್ನಲಾಗಿದೆ 3. ರಿಯಲ್ ಎಸ್ಟೇಟ್- ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವುದು ಇದೇ ವಲಯ. ಮನೆ ಖರೀದಿದಾರರಿಗೆ ತೆರಿಗೆ ವಿನಾಯಿತಿ, ಉತ್ತೇಜನ ನಿರೀಕ್ಷೆ 4. ಆರೋಗ್ಯ - ಕಳೆದ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ರೂ. ಸಿಕ್ಕಿತ್ತು. ಜಿಡಿಪಿಯ ಶೇ. 3 ರಷ್ಟಾದರೂ ಆರೋಗ್ಯ ಕ್ಷೇತ್ರದ ಮೇಲೆ ಹೂಡಿಕೆ ಮಾಡಬೇಕೆಂಬುಬುದು ಪರಿಣತರ ಅಪೇಕ್ಷೆ 5. ಆಟೋಮೊಬೈಲ್- ಬಹುತೇಕ ಎಲ್ಲ ಕಂಪನಿಗಳು ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಕಡೆಗೆ ಗಮನಹರಿಸುತ್ತಿವೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ವಿಚಾರ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ 6. ರೈಲ್ವೆ -ಇನ್ನಷ್ಟು ಬುಲೆಟ್ ಟ್ರೇನ್ ಪರಿಚಯಿಸುವ ನಿರೀಕ್ಷೆ ಇದೆ. ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ ರೈಲ್ವೆ ಕಾರಿಡಾರ್ ಪ್ರಸ್ತಾವನೆ ಇದೆ. 1,80,000 ಕೋಟಿ ರೂ. ನೀಡಲು ರೈಲ್ವೆ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ 7. ಶಿಕ್ಷಣ - ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆ ಬಳಿಕ ಹೆಚ್ಚಿನ ಅನುದಾನ ಹಂಚಿಕೆಯನ್ನು ಶಿಕ್ಷಣ ಕ್ಷೇತ್ರ ನಿರೀಕ್ಷೆ ಮಾಡುತ್ತಿದೆ. ಮುಂದಿನ ಐದು ವರ್ಷಗಳ ಅವಧಿಗೆ ಶಿಕ್ಷಣ ಸಂಸ್ಥೆಗಳ ಮೇಲೆ ವಿಧಿಸುತ್ತಿರುವ ಶೇಕಡ 18ರ ಜಿಎಸ್ಟಿ ಹೊರೆಯನ್ನು ತಗ್ಗಿಸಬೇಕೆಂಬ ಬೇಡಿಕೆ ಇದೆ 8. ಬ್ಯಾಂಕಿಂಗ್- ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಸರ್ಕಾರದ ಪಾಲನ್ನು ಶೇಕಡ 50ಕ್ಕಿಂತ ಕಡಿಮೆಗೆ ಇಳಿಸಬೇಕು; ಇವುಗಳಿಗೆ ಖಾಸಗಿ ಬ್ಯಾಂಕುಗಳಲ್ಲಿರುವಂತಹ ಸ್ವಾತಂತ್ರ್ಯ ಒದಗಿಸಬೇಕೆಂಬ ಕೋರಿಕೆ ಇದೆ. ಸವಾಲು, ಸಾಧ್ಯತೆ: ಹಣದ ಹರಿಯುವಿಕೆ ಹೆಚ್ಚಳಕ್ಕಾಗಿ 5ರಿಂದ 5.5 ಲಕ್ಷ ಕೋಟಿ ರೂ.ಗಳನ್ನು ಬಂಡವಾಳ ವೆಚ್ಚವಾಗಿ ವಲಯಕ್ಕೆ ನೀಡಿಕೆ; ಕರೊನಾ ಬಳಿಕ ಉದ್ಯೋಗ ನಷ್ಟ ಹೆಚ್ಚಾಗಿ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳುವುದು; ಲಾಕ್ಡೌನ್ ಸಡಿಲಿಕೆ ಬಳಿಕ ಸರಕುಗಳ ಬೆಲೆ ಏರುತ್ತಿದೆ. ಹಣದುಬ್ಬರ ಸವಾಲು ಕಾಡುತ್ತಿದೆ; ಕೈಗಾರಿಕೆಗಳ ಸ್ಥಿತಿ ಹದಗೆಟ್ಟಿದೆ. ಉತ್ಪಾದನೆ ಕಡಿಮೆ ಆಗಿ ವಿದೇಶ ಮಾರುಕಟ್ಟೆ ಸಂಪರ್ಕ ತಪ್ಪಿದೆ. ಕಚ್ಚಾವಸ್ತುಗಳ ಕೊರತೆ ಎದುರಾಗಿದೆ.
ಮೊಬೈಲ್ ಆ್ಯಪ್ ವಿಶೇಷ: ಸಾರ್ವಜನಿಕರೂ ಯೂನಿಯನ್ ಬಜೆಟ್ ಮೊಬೈಲ್ ಆಪ್ ಮೂಲಕ ಬಜೆಟ್ ಪ್ರತಿಯನ್ನು ಪಡೆಯಬಹುದಾಗಿದೆ. ಆಪ್ನಲ್ಲಿ ಮುಂಗಡ ಪತ್ರದ 14 ದಾಖಲೆಗಳ ಪಿಡಿಎಫ್ ಪ್ರತಿ ಲಭ್ಯವಿರುತ್ತದೆ. ಇದರಲ್ಲಿ ಮುಂಗಡಪತ್ರದ ಭಾಷಣ ಮತ್ತು ಇತರೆ ದಾಖಲೆಗಳು ಸೇರಿಕೊಂಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಆ್ಯಪ್ ಲಭ್ಯವಿದೆ. ಆ್ಯಪ್ ಬಳಕೆದಾರ ಸ್ನೇಹಿಯಾಗಿದ್ದು, ಬಜೆಟ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು, ಝುೂಮ್ ಮಾಡಿ ನೋಡಬಹುದು ಮತ್ತು ಪ್ರಿಂಟ್ ಕೂಡ ಮಾಡಬಹುದಾಗಿದೆ. ಹುಡುಕುವುದಕ್ಕೆ ಸರ್ಚ್ ಆಯ್ಕೆಯನ್ನೂ ಒದಗಿಸಲಾಗಿದೆ. ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲೂ ಲಭ್ಯವಿದೆ. ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಕೊಂಡಿ ಬಳಸಬಹುದು.
ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಬಹಳಷ್ಟು ಕ್ರಮದ ನಿರೀಕ್ಷೆ ಇದೆ. ನಮ್ಮ ಬೇಡಿಕೆಯನ್ನೂ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದ್ದೇವೆ. | ಪೆರಿಕಲ್ ಸುಂದರ್ ಎಫ್ಕೆಸಿಸಿಐ ಅಧ್ಯಕ್ಷ
ಪ್ರಧಾನಿ ವಿಶ್ವಾಸ
ಸಚಿವೆ ನಿರ್ಮಲಾ ಕಳೆದ ವರ್ಷ ಪ್ಯಾಕೇಜ್ ರೂಪದಲ್ಲಿ 4-5 ಕೊಡುಗೆಗಳನ್ನು ಪ್ರಕಟಿಸಿದ್ದರು. ಇದರ ಮುಂದುವರಿದ ಭಾಗವಾಗಿ ಬಜೆಟ್ನಲ್ಲಿ ಹಲವು ಘೋಷಣೆ ಹೊರಡಿಸಲಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.
ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಮುಂಗಡಪತ್ರವನ್ನು ಮುದ್ರಿಸದೆ ಡಿಜಿಟಲ್ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಇದಕ್ಕೆ ಸಂಸತ್ ತ್ತಿನ ಉಭಯ ಸದನಗಳಿಂದಲೂ ಅನುಮತಿ ದೊರಕಿದೆ. ಹೀಗಾಗಿ, ಸಚಿವೆ ನಿರ್ಮಲಾ ಸೀತಾರಾಮನ್ ಟ್ಯಾಬ್ ನೋಡಿಕೊಂಡು ಮುಂಗಡಪತ್ರ ಭಾಷಣ ಮಾಡಲಿದ್ದಾರೆ. ಬಜೆಟ್ನ ಪ್ರತಿಗಳು ಎಲ್ಲರಿಗೂ ‘ಯೂನಿಯನ್ ಬಜೆಟ್ ಮೊಬೈಲ್ ಆಪ್’ ಮೂಲಕ ಲಭ್ಯವಾಗಲಿದೆ. ಬಜೆಟ್ ಪ್ರತಿ ಮುದ್ರಿಸಬೇಕಾದರೆ ಒಂದೇ ಕಡೆ 100 ಜನ ಎರಡು ವಾರಕ್ಕೂ ಹೆಚ್ಚು ದಿನ ಕೆಲಸ ಮಾಡಬೇಕಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ, ಈ ರೀತಿ ದೀರ್ಘ ಅವಧಿಗೆ ಒಂದೇ ಕಡೆ ಇರುವುದನ್ನು ತಪ್ಪಿಸುವ ಸಲುವಾಗಿ ಡಿಜಿಟಲ್ ಪ್ರತಿ ರೂಪಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.