ಸೈಲೆನ್ಸರ್‌, ಹಾಫ್ ಹೆಲ್ಮೆಟ್‌ಗಳ ಮೇಲೆ ರೋಲರ್ ಹರಿಸಿ ನಾಶ

destruction of half helmets
ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಹಾಫ್ ಹೆಲ್ಮೆಟ್‌ಗಳನ್ನು ರೋಡ್ ರೋಲರ್ ಮೂಲಕ ನಾಶಪಡಿಸಲಾಯಿತು.
Published on

ಶಿವಮೊಗ್ಗ: ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಚಾರ ಠಾಣೆ ಪೊಲೀಸರು ಗುರುವಾರ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳು ಮತ್ತು ಹಾಫ್ ಹೆಲ್ಮೆಟ್‌ಗಳ ಮೇಲೆ ನಗರದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ರೋಡ್ ರೋಲರ್ ಹರಿಸಿ ನಾಶ ಪಡಿಸಿದರು.

ಮೂರು ಸಾವಿರ ಹಾಫ್ ಹೆಲ್ಮೆಟ್‌ಗಳು ಮತ್ತು 70 ಸೈಲೆನ್ಸರ್‌ಗಳನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಎಂ.ಸುರೇಶ್, ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್, ಪಿಎಸ್‌ಐ ತಿರುಮಲೇಶ್ ಸೇರಿ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು. ಕಾರ್ಯಾಚರಣೆ ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ ಮಿಥುನ್‌ಕುಮಾರ್, ಕಳೆದೆರಡು ತಿಂಗಳಿಂದ ಹಾಫ್ ಹೆಲ್ಮಟ್ ಮತ್ತು ಕರ್ಕಷ ಸೈಲನ್ಸರ್ ಕಾರ್ಯಾಚರಣೆ ಮಾಡಲಾಗಿತ್ತು. ಹಾಫ್ ಹೆಲ್ಮಟ್ ಹಾಕುವುದರಿಂದ ನಾಮಕಾವಸ್ಥೆಗೆ ಧರಿಸುವಂತಾಗುತ್ತದೆ. ಈ ಕಾರ್ಯಾಚರಣೆಯನ್ನು ಸಾರ್ವಜನಿರರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಾಶಪಡಿಸಿದ್ದು ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net