

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದ ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ, ಸಿಗ್ನಲ್ ಸಿಗದಂತೆ ಜಾಮರ್ ಅಳವಡಿಸುವುದಕ್ಕೆ ಕೋಟಿ ಕೋಟಿ ರೂ. ಖರ್ಚು ಮಾಡಿದರೂ ಮೊಬೈಲ್ ರಿಂಗಣಿಸುವುದಕ್ಕೆ ಮಾತ್ರ ತಡೆ ಬಿದ್ದಿಲ್ಲ.!
ಪರಪ್ಪನ ಅಗ್ರಹಾರ ಸೇರಿ 7 ಜೈಲುಗಳಿಗೆ ‘ಟವರ್ಸ್ ಆ್ ದಿ ಹರ್ಮೋನೀಸ್ ಸೆಲ್ ಬ್ಲಾಕಿಂಗ್ ಸಿಸ್ಟಮ್’ ಟೆಕ್ನಾಲಜಿ (ಟಿ-ಎಚ್‌ಸಿಬಿಎಸ್) ಒಳಗೊಂಡ ಮೊಬೈಲ್ ಟವರ್ ಅಳವಡಿಸಲಾಗಿದೆ. ಜತೆಗೆ 5 ವರ್ಷದ ನಿರ್ವಹಣೆಗೆ 11.32 ಕೋಟಿ ರೂ. ಬಿಡುಗಡೆಯಾಗಿದೆ. ಟಿ-ಎಚ್‌ಸಿಬಿಎಸ್ ಟವರ್‌ಗಳು ನಿಗದಿತ ವ್ಯಾಪಿಯಲ್ಲಿ ಮೊಬೈಲ್‌ಗೆ ಸಿಗ್ನಲ್‌ಗಳು ದೊರೆಯದಂತೆ ಕೆಲಸ ಮಾಡುತ್ತವೆ. ಇವುಗಳ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಭಯೋತ್ಪಾದಕ ಚಟುವಟಿಕೆ, ಸಮಾಜಘಾತುಕ ಕೃತ್ಯ, ಕೊಲೆ ಪ್ರಕರಣಗಳಂತಹ ಗಂಭೀರ ಕೇಸಿನಲ್ಲಿ ನ್ಯಾಯಾಂಗ ಬಂಧನ ಅಥವಾ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಕೈಯಲ್ಲಿ ಸ್ಮಾರ್ಟ್ ೆನ್ ಸುಲಭವಾಗಿ ಸಿಗುತ್ತಿವೆ. ಕೆಲವರು ಜೈಲಿನಲ್ಲಿ ಕುಳಿತು ಹೊರಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡು ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರೆ, ಇನ್ನೂ ಕೆಲವರು ಬೆದರಿಕೆ ಕರೆ ಮಾಡಿ ಹ್ತಾ ವಸೂಲಿ ಮಾಡುತ್ತಿದ್ದಾರೆ.
2.96 ಕೋಟಿ ರೂ. ಬಿಡುಗಡೆ
ಪರಪ್ಪನ ಅಗ್ರಹಾರ ಜೈಲಲ್ಲಿ ಮೂರು ಟಿ-ಎಚ್‌ಸಿಬಿಸ್ ಮೊಬೈಲ್ ಟವರ್ ಅಳವಡಿಕೆ ಮತ್ತು 5 ವರ್ಷದ ನಿರ್ವಹಣೆಗಾಗಿ 4.67 ಕೋಟಿ ರೂ. ವೆಚ್ಚವಾಗುತ್ತಿದೆ. ಮೇ 2ರಂದು 2.96 ಕೋಟಿ ರೂ. ಬಿಡುಗಡೆಯಾಗಿದೆ. ನಟ ದರ್ಶನ್ ಮತ್ತು ರೌಡಿಗಳು ಮೊಬೈಲ್ ಬಳಕೆ ಮಾಡಿರುವ ೆಟೋ ಮತ್ತು ವಿಡಿಯೋ ಹೊರ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಯಿತು. ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಲಾಗಿದೆ.
11.32 ಕೋಟಿ ರೂ. ವೆಚ್ಚ
ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬಳ್ಳಾರಿ, ತುಮಕೂರು ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್‌ಸಿಬಿಎಸ್ ಮೊಬೈಲ್ ಟವರ್ ಅಳವಡಿಕೆ ಮತ್ತು ನಿರ್ವಹಣೆ ಸಲುವಾಗಿ 11.32 ಕೋಟಿ ರೂ. ಮೀಸಲಿಡಲಾಗಿದೆ.
ಬೆಳಕಿಗೆ ಬಂದ ಪ್ರಕರಣ
* ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಶಿವಮೊಗ್ಗ ಜೈಲಿನಲ್ಲಿರುವ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಸುಪಾರಿ ಕೊಟ್ಟಿದ್ದ
* ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗಪುರ ಕಚೇರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ನಟೋರಿಯಸ್ ಜಯೇಶ್ ಪೂಜಾರಿ ಕರೆ ಮಾಡಿ 10 ಕೋಟಿ ರೂ.ಗೆ ಬೇಡಿಕೆ ಒಡ್ಡಿದ್ದ
* ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಸೇವೆ ಡಿಐಜಿ ಟಿ.ಪಿ.ಶೇಷ ಅವರಿಗೆ ಪರಪ್ಪನ ಅಗ್ರಹಾರ, ಬೆಳಗಾವಿ ಹಿಂಡಲಗಾ ಸೆಂಟ್ರಲ್ ಜೈಲಿನಿಂದ ಕರೆ ಮಾಡಿ ವಸತಿಗೃಹ ಸ್ಫೋಟಿಸುವುದಾಗಿ ಬೆದರಿಕೆ
*ಪರಪ್ಪನ ಅಗ್ರಹಾರದಿಂದ ರೌಡಿ ಮನೋಜ್ ಎಂಬಾತ ಯುವತಿಗೆ ನಗ್ನ ವಿಡಿಯೋ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ 40 ಸಾವಿರ ರೂ. ವಸೂಲಿ ಮಾಡಿದ್ದ
ಸೇವಾ ಪೂರೈಕೆದಾರರಿಗೆ ಆರ್‌ಟಿಜಿಎಸ್ ಮೊತ್ತ
* ರಿಲಿಯನ್ಸ್ ಜಿಯೋ ಇನ್‌ೆಕಂ ಲಿ. 86,99,999 ರೂ.
* ಭಾರತೀ ಏರ್‌ಟೆಲ್ ಲಿಮಿಟೆಡ್ 87 ರೂ. ಲಕ್ಷ ರೂ.
* ವೋಡಾೆನ್ ಐಡಿಯ ಲಿಮಿಟೆಡ್ 57 ಲಕ್ಷ ರೂ.
* ಮೂರು 30 ಕೆವಿಎ ಡೀಸಲ್ ಜನರೇಟರ್ ಖರೀದಿಗೆ 19 ಲಕ್ಷ ರೂ.