

ಮಂಡ್ಯ: ಮಾನಸಿಕ, ದೈಹಿಕ ಶಕ್ತಿಗೆ ಪೂರಕವಾಗಿದ್ದ ದೇಸಿ ಕ್ರೀಡೆಗಳನ್ನು ನೆನಪಿಸುವ ಹಾಗೂ ಅದರ ಸೊಬಗನ್ನು ಯುವಜನತೆಗೆ ಪರಿಚಯಿಸುವ ಸಲುವಾಗಿ ‘ವಿಜಯವಾಣಿ’ ದಿನಪತ್ರಿಕೆ ಹಾಗೂ ‘ದಿಗ್ವಿಜಯ’ ನ್ಯೂಸ್ ಕೃಷಿ ಮೇಳದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ.
ಫೆ.21ರಂದು ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಮಧ್ಯಾಹ್ನ 3ಗಂಟೆಗೆ ದೇಸಿ ಕ್ರೀಡೆಗಳಿಗೆ ಚಾಲನೆ ಸಿಗಲಿದ್ದು, ಪುರುಷರಿಗೆ ಮೂಟೆ ಹೊರುವ ಸ್ಪರ್ಧೆ, ಗೋಣಿ ಚೀಲದ ಓಟ, ಹಿಮ್ಮುಖ ಓಟ, ಬಂಡಿ ಹೊಡೆಯುವ ಸ್ಪರ್ಧೆ, ಬುಗರಿ, ಗುಂಪು ಸ್ಪರ್ಧೆಗಳಾದ ಹಗ್ಗಜಗ್ಗಾಟ, ಲಗೋರಿ, ಕುದುರೆ ಓಟ ಸ್ಪರ್ಧೆಗಳಿರುತ್ತವೆ.
ವಿಶೇಷ ಸೂಚನೆ: ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಪರಿಕರಗಳನ್ನು ತಾವೇ ತರಬೇಕು.