

Jr NTR: ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ವಿರುದ್ಧ ಅನಂತಪುರ ಟಿಡಿಪಿ ಶಾಸಕ ದಗ್ಗುಬಾಟಿ ವೆಂಕಟೇಶ್ವರ್ ಪ್ರಸಾದ್ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಭಾನುವಾರ ಎನ್‌ಟಿಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರ ಬ್ಯಾನರ್ ಕಟೌಟ್ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಡೊಯೋ ವೆಂಕಟೇಶ್ವರ ಪ್ರಸಾದ್ ಮತ್ತು ಅನಂತಪುರ TNSF ಅಧ್ಯಕ್ಷ ಮತ್ತು NTR ಅಭಿಮಾನಿಗಳ ಸಂಘದ ಪ್ರತಿನಿಧಿ ಗುಥಾ ಧನಂಜಯ್ ನಾಯ್ಡು ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಇದು ಹೃತಿಕ್ ರೋಷನ್-ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್ -2 ಬಿಡುಗಡೆಗೆ ಮುಂಚಿತವಾಗಿ ಮಾತನಾಡಿದ್ದು ಎಂದು ಹೇಳಲಾಗಿದೆ.
ಆಡಿಯೋದಲ್ಲಿ ಶಾಸಕ ಎನ್‌ಟಿಆರ್ ಬಗ್ಗೆ ಆಕ್ಷೇಪರ್ಹ ಪದಗಳನ್ನು ಬಳಸಿದ್ದು, ಆಗಸ್ಟ್ 14ರಂದು ಬಿಡುಗಡೆಯಾಗಬೇಕಿದ್ದ ವಾರ್-2 ಚಿತ್ರವನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಆಡಿಯೋ ಸೋರಿಕೆ ಬಳಿಕ ಎನ್‌ಟಿಆರ್ ಅಭಿಮಾನಿಗಳು ಅನಂತಪುರದಲ್ಲಿರುವ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕ್ಷೇತ್ರದಾದ್ಯಂತ ಹಲವಾರು ಸ್ಥಳಗಳಲ್ಲಿನ ಶಾಸಕರ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆಗಮಿಸಿದರೂ, ಅಭಿಮಾನಿಗಳು ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು.
2024ರ ಆಂಧ್ರಪ್ರದೇಶ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಶಾಸಕರ ಗೆಲುವಿನಲ್ಲಿ ತಮ್ಮ ಪಾತ್ರವನ್ನು ನೆನಪಿಸಿಕೊಂಡಿರುವ ಅನೇಕ ಅಭಿಮಾನಿಗಳು, ಜೂನಿಯರ್ ಎನ್‌ಟಿಆರ್ ವಿರುದ್ಧ ಅವರು ಹೇಗೆ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಚಿತ್ರದ ಬಿಡುಗಡೆಗೆ ಬೆದರಿಕೆ ಹಾಕುತ್ತಾರೆ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ತಕ್ಷಣವೇ ಬೇಷರತ್ತಾದ ಕ್ಷಮೆಯಾಚನೆ ಮಾಡಬೇಕು ಒತ್ತಾಯಿಸಿದ್ದಾರೆ.
ಎನ್‌ಟಿಆರ್ ಅಭಿಮಾನಿಗಳ ಆಕ್ರೋಶವನ್ನು ನೋಡಿದ ಶಾಸಕ ಪ್ರಸಾದ್, ಕ್ಷಮೆಯಾಚನೆಯ ವಿಡಿಯೋ ಬಿಡುಗಡೆ ಮಾಡಿದ್ದು, ಆದ್ಯಾಗೂ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ. ನಾನು ನಾರ-ನಂದಮೂರಿ ಕುಟುಂಬಗಳ ಅಭಿಮಾನಿ. ಇದು ನನ್ನ ವಿರುದ್ಧ ರಾಜಕೀಯ ವಿರೋಧಿಗಳು ಮಾಡಿರುವ ಷಡ್ಯಂತ್ರ. ನನ್ನ ಮಾನಹಾನಿ ಮಾಡಲು ಯತ್ನಿಸಿದ್ದಾರೆ. ಈ ಕುರಿತು ನಾನು ಅನಂತಪುರ ಎಸ್ಪಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)