

ಥಾಣೆ: ರಾಜಕೀಯ ಮುಖಂಡನ ವಿರುದ್ಧ ಹೇಳಿಕೆಯೊಂದನ್ನು ನೀಡಿ,ಮರಾಠಿ ನಟಿ ಪೇಚಿಗೆ ಸಿಲುಕಿದ್ದು, ಬಂಧನಕ್ಕೊಳಗಾಗಿದ್ದಾರೆ. ಬೇರೊಬ್ಬರು ಬರೆದ ಪೋಸ್ಟನ್ನು ಶೇರ್ ಮಾಡಿ ನಟಿ ಈಗ ಜೈಲುವಾಸ ಅನುಭವಿಸುವಂತಾಗಿದೆ.
ಎನ್ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮರಾಠಿ ನಟಿ ಕೇತ್ಕಿ ಚಿತಲೆ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಬೇರೊಬ್ಬರು ಬರೆದ ಕಾಮೆಂಟ್ಸ್ಅನ್ನು ಈ ನಟಿ ಹಂಚಿಕೊಂಡಿದ್ದಷ್ಟೇ, ಇದೇ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
23 ವರ್ಷದ ವೈದ್ಯಕೀಯ ವಿದ್ಯಾರ್ಥಿಯನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣ ಇಷ್ಟೊಂದು ಗಂಭೀರತೆ ಪಡೆಯಲು ಅಂತಹ ಹೇಳಿಕೆ ಏನಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ನೊಂದಿಗೆ ಅಧಿಕಾರಿವನ್ನು ಹಂಚಿಕೊಂಡಿರುವ ಪವಾರ್ ವಿರುದ್ಧ ಟ್ವಿಟ್ಟರ್ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಲಾಗಿತ್ತು. ಮುಂದೆ ನರಕ ಕಾಯುತ್ತಿದೆ, ಬ್ರಾಹ್ಮರಣದನ್ನು ನೀವು ದ್ವೇಷಿಸುತ್ತೀರಿ ಎಂಬ ಹೇಳಿಕೆಯನ್ನು ಶೇರ್ ಮಾಡಿರುವುದೇ ನಟಿಗೆ ಸಂಕಷ್ಟಕ್ಕೆ ಕಾರಣವಾಗಿದೆ. (ಏಜೆನ್ಸೀಸ್)