

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟರನ್ನು ಅವಮಾನಿಸುವ ಕೆಲಸ ತುಂಬಾ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಬಳಸಿ ಇತರ ಹೀರೋಗಳ ಅವಹೇಳನಕಾರಿ ಪೋಸ್ಟ್ ಹಾಗೂ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುವ ಪ್ರಕ್ರಿಯೆ ಜೋರಾಗಿದೆ.
ಯಾರದ್ದೋ ಹೆಸರನ್ನು ಅವರ ಮಧ್ಯೆ ತಂದಿಟ್ಟು ಸುದೀಪ್ರನ್ನು ಟ್ರೋಲ್ ಮಾಡುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಇದರಿಂದ ಕೋಪಗೊಂಡಿರುವ ಕಿಚ್ಚನ ಅಭಿಮಾನಿಗಳು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಟ್ವಿಟ್ಟರ್ ಸೇರಿ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರಿಗೆ ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಕಠಿಣ ಎಚ್ಚರಿಕೆ ವಹಿಸುವಂತೆ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ಈ ದೂರು ನೀಡಲಾಗಿದೆ.
ಬಹುತೇಕ ಹೀರೋಗಳಿಗೆ ಅಭಿಮಾನಿಗಳ ಜೊತೆಗೆ ಅವರನ್ನು ಧ್ವೇಷಿಸುವ ವರ್ಗವೂ ಸಹ ಇದ್ದೇ ಇರುತ್ತದೆ. ಅಂದಹಾಗೆ ಬಾದ್ಷಾ ಕಿಚ್ಚ ಸುದೀಪ್ಗೆ ಅನೇಕ ಅಭಿಮಾನಿ ಬಳಗ ಇರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಅವರನ್ನು ಅವಮಾನಿಸುವ ವರ್ಗವೂ ಸಹ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದೆ.
(ಏಜೆನ್ಸೀಸ್)
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾಗಿರುವ ಕಿಚ್ಚ ಸುದೀಪ ರವರ ವಿರುದ್ಧ ಎಕ್ಸ್ (ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ವಿಕೃತವಾದ ವೈಯಕ್ತಿಕ ನಿಂದನೆ ಮಾಡುವ / ಹೀಯಾಳಿಸುವ ಫೇಕ್ ಫೋಟೋಶಾಪ್ ವಿಡಿಯೋ ಹಾಗು ಫೋಟೋಗಳನ್ನು ಹರಿಬಿಡುವುದು ಅಶ್ಲೀಲ ಪದಬಳಕೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇದು ಕನ್ನಡ ಚಿತ್ರರಂಗದ ಕಲಾವಿದರ ನಡುವಿನ ಸಮರಕ್ಕೆ ಮತ್ತು ಸ್ಟಾರ್ ವಾರ್ಗೆ ಕಾರಣವಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ನೇರ ಕಾರಣವಾಗಿದೆ. ಈ ದೂರಿನ ಜೊತೆಗೆ ಲಗ್ಗತ್ತಿಸಲಾಗಿರುವ ಅಂತಹ ಹಲವಾರು ಖಾತೆಗಳು ಹಾಗೂ ಪೋಸ್ಟ್‌ಗಳ ವಿವರವನ್ನು ಪರೀಶೀಲಿಸಿ ಅವರ ವಿರುದ್ಧ ಈ ಕೂಡಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.