ಚಿಂತೆ, ಒತ್ತಡದಲ್ಲಿದ್ದರೆ ಕರೊನಾ ಲಸಿಕೆಯೂ ಕೆಲಸ ಮಾಡುವುದಿಲ್ಲ! ವಿಜ್ಞಾನಿಗಳ ಎಚ್ಚರಿಕೆ

Front corona
Published on

ನವದೆಹಲಿ: ಪೂರ್ತಿ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೊನಾ ಸೋಂಕಿಗೆ ಲಸಿಕೆ ಲಭ್ಯವಾಗಿದೆ. ಹಲವಾರು ಮೂಲಗಳಿಂದ ಲಸಿಕೆ ಸಿದ್ಧವಾಗಿದ್ದು, ಬಹುತೇಕ ರಾಷ್ಟ್ರಗಳಲ್ಲಿ ಲಸಿಕೆ ಹಂಚಿಕೆ ಆರಂಭವಾಗಿದೆ. ಆದರೆ ಈ ಲಸಿಕೆಯ ಸಾಮರ್ಥ್ಯ ಮನುಷ್ಯನ ಮಾನಸಿಕ ಸ್ಥಿತಿಗತಿಯ ಮೇಲೂ ನಿರ್ಧಾರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಸಾವಿರಾರು ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಆದರೆ ಎಲ್ಲರ ಮೇಲೂ ಲಸಿಕೆ ಒಂದೇ ರೀತಿಯಲ್ಲಿ ಪರಿಣಾಮ ತೋರಿಲ್ಲ. ಕೆಲವೊಂದಿಷ್ಟು ಜನರಲ್ಲಿ ಉತ್ತಮ ಸಾಮರ್ಥ್ಯವನ್ನು ತೋರಿಸಿದ್ದರೆ ಮತ್ತೊಂದಿಷ್ಟು ಜನರಲ್ಲಿ ಲಸಿಕೆಯ ಸಾಮರ್ಥ್ಯ ಕಡಿಮೆಯಾಗಿದೆ. ಇದಕ್ಕೆ ಕಾರಣ ಮನುಷ್ಯ ಜೀವಿಸುತ್ತಿರುವ ವಾತಾವರಣದ ಜತೆ ಆತನ ಮನಸ್ಥಿತಿಯೂ ಆಗಿರುತ್ತದೆ. ಯಾರು ಖಿನ್ನತೆ, ಚಿಂತೆ, ಒತ್ತಡ ಮತ್ತು ಒಂಟಿತನದಿಂದ ಬಳಲುತ್ತಿರುತ್ತಾರೋ ಅವರಲ್ಲಿ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net