ರೋಗಿಯ ಹಲ್ಲು ತೆಗೆದ ವೈದ್ಯನಿಗೆ 12 ವರ್ಷ ಜೈಲು; ಇಂಥ ಎಡಬಿಡಂಗಿಯನ್ನು ನೀವು ನೋಡಿರಲಿಕ್ಕಿಲ್ಲ...!

Doctor
Published on

ಹಲ್ಲು ಕೀಳುವ ಪ್ರಕ್ರಿಯೆ ತುಂಬ ಸೂಕ್ಷ್ಮವಾದದ್ದು. ದೃಢವಾಗಿ ನಿಂತು, ಕೈಗಳ ಮೂಲಕ ತಜ್ಞ ದಂತವೈದ್ಯರು ಈ ಕೆಲಸ ಮಾಡುತ್ತಾರೆ. ಹಲ್ಲು ಕೀಳುವಾಗ ರೋಗಿಯೂ ಅಲುಗಾಡಬಾರದು..ವೈದ್ಯರೂ ಕೈಗಳನ್ನು ಅಲುಗಾಡಿಸಬಾರದು. ಹಾಗೇನಾದರೂ ಆದರೆ ರೋಗಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯೂ ಇರುತ್ತದೆ.

ಆದರೆ ಇಲ್ಲೊಬ್ಬ ವೈದ್ಯ ಹೋವರ್​ಬೋರ್ಡ್​ (ಸ್ಕೇಟ್​ಬೋರ್ಡ್​ನ್ನು ಹೋಲುವ ಸಾಧನವಾಗಿದ್ದು, ಅದರ ಮೇಲೆ ನಿಂತು ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಬಹುದು) ಮೇಲೆ ನಿಂತು ರೋಗಿಯೋರ್ವನ ಹಲ್ಲು ತೆಗೆದಿದ್ದಾರೆ.

ಪ್ರಜ್ಞೆಯಿಲ್ಲದೆ ಮಲಗಿದ್ದ ರೋಗಿಯ ಹಲ್ಲನ್ನು ಈ ವೈದ್ಯ ಹೋವರ್​ ಬೋರ್ಡ್ ಮೇಲೆ ನಿಂತು ಬೇಕಾಬಿಟ್ಟಿ ಹೊರತೆಗೆದಿದ್ದಾನೆ. ನಂತರ ಹೋವರ್​ಬೋರ್ಡ್​ ಮೇಲೆಯೇ ಅಲ್ಲಿಂದ ಹೋಗುವ ವಿಡಿಯೋ ವೈರಲ್​ ಆಗಿದೆ. ಆ ವೈದ್ಯನಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: 18ರಿಂದ ಬದಲಾಗಲಿದೆ ಎಟಿಎಂ ವಿತ್​ಡ್ರಾ ರೂಲ್ಸ್​: ಇಲ್ಲಿದೆ ಮಾಹಿತಿ

ಯುಎಸ್​​ನಲ್ಲಿ ಘಟನೆ ನಡೆದಿದ್ದು ಈ ವೈದ್ಯನನ್ನು ಸೇಥ್ ಲಾಕ್ಹಾರ್ಟ್ ಎಂದು ಗುರುತಿಸಲಾಗಿದೆ. ವೆರೊನಿಕಾ ವಿಹೆಲ್ಮ್​ ಎಂಬಾಕೆಗೆ ಈತ ಇಷ್ಟು ನಿರ್ಲಕ್ಷ್ಯದಿಂದ ಹಲ್ಲು ತೆಗೆದಿದ್ದಾಗಿ ಗೊತ್ತಾಗಿದೆ.

ವೆರೊನಿಕಾ ಅವರಿಗೆ ಹೇಳದೆಯೇ ಅನಸ್ತೇಶಿಯಾ ಕೊಟ್ಟಿದ್ದ ವೈದ್ಯ ನಂತರ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದ. ಅಷ್ಟೇ ಅಲ್ಲ ಈ ಹಿಂದೆ ಹಲವು ವಂಚನೆ ಪ್ರಕರಣಗಳಲ್ಲೂ ಈತನ ಹೆಸರು ಕೇಳಿಬಂದಿದ್ದು ಕೋರ್ಟ್​ ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಲಾಕ್ಹಾರ್ಟ್​ಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ, ನ್ಯಾಯಾಲಯ ತೀರ್ಪು ನೀಡಿದೆ.

ಲೊಕ್ಹಾರ್ಟ್​ 2015ರಿಂದ ದಂತವೈದ್ಯಕೀಯ ಶಾಸ್ತ್ರ ಅಭ್ಯಾಸ ಪ್ರಾರಂಭಿಸಿದ್ದ. ಈತನ ಎಡವಿಡಂಗಿ ಕೆಲಸಗಳ ಬಗ್ಗೆ ಸಹೋದ್ಯೋಗಿ ವೈದ್ಯರೇ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net