ಡೆಂಗಿ ಮರಣ ಮೃದಂಗ;ಕಣ್ಮುಚ್ಚಿ ಕುಳಿತ ಸರ್ಕಾರ;ಟ್ವೀಟ್‌ನಲ್ಲಿ ಬಿಜೆಪಿ ತರಾಟೆ

Dengue
Published on

ಬೆಂಗಳೂರು:
ಅಭಿವೃದ್ಧಿ ಶೂನ್ಯವಾಗಿರುವ ರಾಜ್ಯದಲ್ಲಿ ಡೆಂಗಿ ಹೆಚ್ಚಳವಾಗಿದ್ದು, ಮರಣ ಮೃದಂಗ ಭಾರಿಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಟುವಾಗಿ ಟೀಕಿಸಿದೆ.
ಡೆಂಗೆ ಈಗಾಗಲೇ 7 ಜನರು ಬಲಿಯಾಗಿದ್ದು, ಸಾವಿರಾರು ಜನರು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿರುವ ಬಿಜೆಪಿ, ಈಗಲಾದರೂ ಮಹಾ ಮೌನ ಮುರಿದು ಡೆಂ ನಿಯಂತ್ರಣದ ಬಗ್ಗೆ ಕನಿಷ್ಠ ಒಂದು ಸಭೆಯನ್ನಾದರೂ ನಡೆಸಿ ಎಂದು ಸಲಹೆ ನೀಡಿದೆ.

ರೈತ ವಿರೋಧಿ ಸರ್ಕಾರ:
ರೈತ ವಿರೋಧಿ ನೀತಿಯಿಂದ ಈಗಾಗಲೇ ಸಾಔಇರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಡಿನ ರೈತ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದ ಸರ್ಕಾರವೆಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈಗ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆಏರಿಕೆ ಜೊತೆಗೆರೈತರ ಪಾಲಿನ ಸಬ್ಸಿಡಿ ಹಣಕ್ಕೂ ಕನ್ನ ಹಾಕಿದ ರೈತ ಹಂತಕ ಸರ್ಕಾರ ಎಂದು ಟ್ವೀಟ್‌ನಲ್ಲಿ ಕಿಡಿಕಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net