ಡೆಂಘೆ ನಿಯಂತ್ರಣ ಕುರಿತು ಡಿ.ಸಿ, ಸಿಇಒ ಜೊತೆಗೆ ಸಭೆ;ಡೆಂಘೆ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸಚಿವ ಸೂಚನೆ

Dinesh gundoo rao
Published on

ಬೆಂಗಳೂರು:
ಡೆಂಘೆ ನಿಯಂತ್ರಣ ಕ್ರಮಗಳ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿ, ಸಿಇಒ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಡೆಂಘೆ ಹಾಟ್ ಸ್ಪಾಟ್‌ಗಳನ್ನ ಪತ್ತೆ ಹಚ್ಚಿ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿದರು.
ಎಲ್ಲಿ ಹೆಚ್ಚು ಡೆಂಘೆ ಪ್ರಕರಣಗಳು ಕಂಡುಬರುತ್ತವೆ, ಅಂತಹ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರಯಲು ಸಲಹೆ ನೀಡಿದರು. ಇಂಥಹ ಪ್ರದೇಶಗಳಲ್ಲಿ ಯಾರಿಗೆ ಜ್ವರ ಕಂಡುಬಂದರು, ಕಡ್ಡಾಯವಾಗಿ ಡೆಂಘೆ ಟೆಸ್ಟಿಂಗ್‌ಗೆ ಒಳಪಡಿಸಿ. ಆರಂಭದಲ್ಲೇ ಡೆಂಘೆ ಪತ್ತೆ ಆದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ವಿಳಂಭವಾದಾಗ ಸಾವುಗಳು ಸಂಭವಿಸುತ್ತವೆ. ಡೆಂಘೆಯಿಂದ ಇದರಿಂದ ಡೆಂಗಿಯಿಂದಾಗುವ ಸಾವುಗಳಾಗಬಾರದು. ಸಾವುಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ಮಾಡಬೇಕು. ಮೆಡಿಕಲ್ ಆಫಿಸರ್ಸ ಸ್ಕೂಲ್ ಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಘೆ ಕುರಿತು ತಿಳಿಹೇಳಬೇಕು. ಪ್ರಮುಖವಾಗಿ ಲಾರ್ವಾ ಉತ್ಪತ್ತಿ ಕಂಡುಬಂದಲ್ಲಿ, ಅದನ್ನ ನಾಶ ಪಡಿಸುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಿ ಎಂದರು.
ಜಿಲ್ಲಾವಾರು ಡೆಂಘೆ ಕೇಸ್‌ಗಳನ್ನು ಪ್ರಕಟಿಸಬೇಕು. ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯವರು ಕೂಡ ವಾರಕ್ಕೆ ಒಂದು ದಿನ ಶುಕ್ರವಾರ ಫೀಲ್ಡ್ ಗಿಳಿದು ಕೆಲಸ ಮಾಡ್ಬೇಕು ಎಂದರು. ಒಂದು ಗಂಟೆಯ ಕಾಲವಾದರು ಡೆಂಘಿ ನಿವಾರಣೆಗೆ ಮೀಸಲಿಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಬೇಕು. ಡೆಂಘೀ ಟೆಸ್ಟ್‌ಗೆ ನಿಗದಿ ಮಾಡಿರುವ ದರವನ್ನ ಕಡ್ಡಾಯವಾಗಿ ಪಾಲಿಸಲು ಕ್ರಮ ವಹಿಸುವಂತೆಯೂ ಸೂಚಿಸಿದರು.
ಈಡಿಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕೂಡ ಕಂಡು ಬರುತ್ತದೆ. ಪಕ್ಕದ ರಾಜ್ಯದಲ್ಲಿ ಝೀಕಾ ವೈರಸ್ ಕಂಡುಬಂದಿರುವುದರಿಂದ ರಾಜ್ಯದಲ್ಲೂ ಎಚ್ವರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಕೇಸ್ ಪತ್ತೆಯಾಗಿದೆ. ಆದರೆ ಇನ್ನೂ ಕನ್ಪರ್ಮ ಆಗಿಲ್ಲ.
ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ ಅಲರ್ಟ್ ಆಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net