

ಮೈಸೂರು: ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ(93) ಅವರು ಇಂದು ನಿಧನರಾದರು.
ಕರ್ನಾಟಕ ಸಂಗೀತದಲ್ಲಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ವಿದ್ವಾಂಸ ಡಾ. ಸತ್ಯನಾರಾಯಣ ಅವರು 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ನಿನ್ನೆ ರಾತ್ರಿ ಜಯನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪುತ್ರ ನಂದಕುಮಾರ್, ಪುತ್ರಿ ರೋಹಿಣಿ ಸೇರಿ ಅಪಾರ ಬಂಧುಗಳಿದ್ದಾರೆ.
ಚೆನ್ನಪಟ್ಟಣದ ಬಳಿಯ ರಸಋಷಿ ಪ್ರತಿಷ್ಠಾನ ಸಂಶೋಧನಾ ಕೇಂದ್ರದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸ್ ಉಪಆಯುಕ್ತ ಮುತ್ತುರಾಜ್ ನೇತೃತ್ವದಲ್ಲಿ ಅಂತಿಮ ಗೌರವ ವಂದನೆ ಸಲ್ಲಿಸಲಾಯಿತು.