ಖಬರಸ್ತಾನಕ್ಕೆ ಜಮೀನು ನೀಡಲು ಆಗ್ರಹ

choradi protest
ಖಬರಸ್ತಾನಕ್ಕೆ ಭೂಮಿ ನೀಡುವಂತೆ ಒತ್ತಾಯಿಸಿ ಚೋರಡಿ ಜಾಮೀಯಾ ಮಸ್ಜಿದ್ ಕಮಿಟಿ ಪ್ರಮುಖರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ಇಸ್ಮಾಯಿಲ್, ಅತಾವುಲ್ಲಾ, ಅನ್ಸರ್, ನಯಾಬ್ ಅಹಮ್ಮದ್, ರಿಜ್ವಾನ್ ಇತರರಿದ್ದರು.
Published on

ಶಿವಮೊಗ್ಗ: ಖಬರಸ್ತಾನಕ್ಕಾಗಿ ಜಮೀನು ಮೀಸಲಿಡುವಂತೆ ಒತ್ತಾಯಿಸಿ ತಾಲೂಕಿನ ಚೋರಡಿ ಜಾಮೀಯಾ ಮಸ್ಜಿದ್ ಕಮಿಟಿ ಮುಖಂಡರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚೋರಡಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ಆದರೆ ಮುಸ್ಲಿಂರ ಅಂತ್ಯಸಂಸ್ಕಾರ ಮಾಡಲು ಸೂಕ್ತ ಜಾಗ ಇಲ್ಲ. ಹಲವು ವರ್ಷಗಳಿಂದ ಕುಮದ್ವತಿ ನದಿ ದಡದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಅತಿವೃಷ್ಟಿ ಸಂದರ್ಭದಲ್ಲಿ ಗೋರಿಗಳು ಕೊಚ್ಚಿ ಹೋಗುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಖಬರಸ್ತಾನಕ್ಕೆ ಸೂಕ್ತ ಜಾಗ ನೀಡುವಂತೆ 25 ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೂ ಯಾರೂ ಸ್ಪಂದಿಸಿಲ್ಲ. ಈಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ಚೋರಡಿ ಜಾಮೀಯಾ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅನ್ಸರ್, ಅತಾವುಲ್ಲಾ, ಸನಾವುಲ್ಲಾ, ಬಾಷಾ, ನಯಾಬ್ ಅಹಮ್ಮದ್, ಕಲೀವುಲ್ಲಾ, ರಿಜ್ವಾನ್, ನಜೀರ್ ಅಹಮ್ಮದ್, ಸಮೀವುಲ್ಲಾ, ಖಾಸೀಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net