

ಕೋಲಾರ: ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರ ನಿಯೋಗವು, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು, ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿದರು.
ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿರುವ ರೈತರು, ಮಾವು ಬೆಲೆ ಕುಸಿತದ ಬಗ್ಗೆ ಚರ್ಚಿಸಿದರು. ನಂತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಮಾವು ಬೆಳೆಗಾರರ ಸಂದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ, ಕಳೆದ ವರ್ಷಗಳಿಗೆ ಹೊಲಿಸಿದರೆ ಈ ವರ್ಷ ಮಾವಿನ ಬೆಲೆ ತೀರ ಣಿಸಿದೆ. ಇದರಿಂದ ಮಾವು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಬಾರಿಗಿಂತ ಈ ಬಾರಿ ಇಳುವಳಿಯೂ ಕಡಿಮೆ ಇದೆ. ಉತ್ತಮ ಬೆಲೆ ಬರುತ್ತದೆ ಎಂಬ ನಿರೀೆಯಿತ್ತು. ಆದರೆ ತೋತಾಪುರಿ ತಳಿ ಕೇಳುವವರೇ ಇಲ್ಲ. ಸರ್ಕಾರ ಮುಂದಾಲೋಚನೆ ಇಟ್ಟುಕೊಂಡು ಬಲ್ಪ್ ್ಯಾಕ್ಟರಿಗಳನ್ನು ತೆರೆದಿದ್ದರೆ ಸಮಸ್ಯೆ ಉದ್ಬವಿಸುತ್ತಿರಲಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಆಂಧ್ರದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು, ಚಿತ್ತೂರು ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೋಲಾರ ಜಿಲ್ಲೆಯಿಂದ ಮಾವಿನ ಲಾರಿಗಳು ಆಂಧ್ರ ಕಡೆಗೆ ಹೋಗದಂತೆ ರ್ನಿಬಂಧ ವಿಧಿಸಿ ಆದೇಶಿದ್ದಾರೆ. ತೋತಾಪುರಿ ಒಂದು ಕೆಜಿಗೆ ್ಯಾಕ್ಟರಿಯಿಂದ 8 ರೂ. ಹಾಗೂ ಸರ್ಕಾರದಿಂದ 4 ರೂ. ಸೇರಿ 12 ರೂ. ನಿಗದಿಪಡಿಸಿದ್ದಾರೆ. ಈ ರೀತಿ ರಾಜ್ಯದಲ್ಲೇಕೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ರೈತರ ಮನವಿಗೆ ಸ್ಪಂದಿಸಿದ ಸಚಿವ ಬೈರತಿ ಸುರೇಶ್ ಅವರು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು. ಸಚಿವ ಸಂಪುಟ ಸಭೆಯಿದ್ದು ಮೊದಲ ವಿಷಯವೇ ಮಾವು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಬೆಳೆಗಾರರಾದ ಶ್ರೀನಿವಾಸ್, ಸೂರ್ಯನಾರಾಯಣ ಇದ್ದರು.