ರಾಜ್ಯ ಮಹಾನಗರ ಪಾಲಿಕೆ ನೌಕರರಿಗೂ ಒಪಿಎಸ್ ಅನ್ವಯಿಸಲು ಆಗ್ರಹ

palike strike
Published on

ಬೆಂಗಳೂರು: ಮಹಾನಗರ ಪಾಲಿಕೆ ನೌಕರರಿಗೂ 7ನೇ ವೇತನ ಆಯೋಗದ ಶಿಾರಸು ಅನ್ವಯಿಸುವುದು, ಎನ್‌ಪಿಎಸ್ ಬದಲು ಒಪಿಎಸ್ ಪಿಂಚಣಿ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಈ ತಿಂಗಳ 29ರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘವು ಎಚ್ಚರಿಕೆ ರವಾನಿಸಿದೆ.

ಸರಿಸುಮಾರು 14 ವರ್ಷಗಳಿಂದ ವೃಂದ ಹಾಗೂ ನೇಮಕ ನಿಯಮಾವಳಿ (ಸಿ ಆ್ಯಂಡ್ ಆರ್) ತಿದ್ದುಪಡಿ ಮಾಡದ ಕಾರಣ ಪಾಲಿಕೆ ನೌಕರರು ಆಡಳಿತ ಸೌಲಭ್ಯವನ್ನು ಪಡೆಯದೆ ವಂಚಿತರಾಗಿದ್ದಾರೆ. ಹೀಗಾಗಿ ಸಿ ಆ್ಯಂಡ್ ಆರ್ ರೂಲ್ಸ್ ಕರಡು ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಬೇಕು. ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವಂತೆ ಪಾಲಿಕೆ ನೌಕರರಿಗೂ ಕೆಜಿಐಡಿ ಮತ್ತು ಸಾಮಾನ್ಯ ಭವಿಷ್ಯ ನಿಧಿ ಜಾರಿಗೊಳಿಸಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ನಮ್ಮ ನೌಕರರಿಗೂ ಅನ್ವಯಿಸುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net