ನಾನು ಮದುವೆಯಾಗಲಿರುವ ಪುರುಷ ಹೀಗಿರಬೇಕು ಎಂದು ಆರಂಭವಾಗುವ ಈ ವಿಲಕ್ಷಣ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆಕೆ ವಿಧಿಸಿರುವ ಮೊದಲ ನಿಬಂಧನೆಯಂದರೆ ತನ್ನ ಭಾವಿ ಪತಿ ಕಡ್ಡಾಯವಾಗಿ ಬ್ರಹ್ಮಚಾರಿಯಾಗಿರಬೇಕು ಎಂಬುದು. ಇನ್ನುಳಿದಂತೆ ಆತನ ತಿಂಗಳ ಆದಾಯ ಕನಿಷ್ಠ 2 ಲಕ್ಷ ರೂಪಾಯಿ ಇರಬೇಕು. ಇದರೊಂದಿಗೆ ಆತ ನೋಡಲು ಸುಂದರನಾಗಿರಬೇಕು, 6 ಅಡಿ ಎತ್ತರ ಇರಬೇಕು, ಅಡುಗೆ ಮಾಡಲು ಗೊತ್ತಿರಬೇಕು, ಮಹಿಳಾ ದ್ವೇಷಿಯಾಗಿರಬಾರದು, ಯಾವುದೇ ಸೋಷಿಯಲ್ ಮೀಡಿಯಾ ಬಳಸಬಾರದು ಹಾಗೂ ಯಾವುದೇ ಮಹಿಳಾ ಸ್ನೇಹಿತರನ್ನು ಹೊಂದಿರಬಾರದು ಎಂದು ಆಕೆ ಪಟ್ಟಿ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತ ಎಲ್ಲಿಗೆ ಹೋದರೂ ತನಗೇ ಹೇಳಿ ಅನುಮತಿ ಪಡೆಯಬೇಕು, ತನ್ನ ಲೈವ್ ಲೊಕೇಶನ್ ಅನ್ನು ಸದಾ ಹಂಚಿಕೊಳ್ಳುತ್ತಿರಬೇಕು ಮತ್ತು ತನ್ನನ್ನು ವಿದೇಶಿ ಪ್ರವಾಸಗಳಿಗೆ ಕರೆದೊಯ್ಯಬೇಕು ಎಂದು ಬರೆದುಕೊಂಡಿರುವ ಯುವತಿ, ಇಂತಹ ಪುರುಷ ನನಗೆ ಎಲ್ಲಿ ಸಿಗುತ್ತಾನೆ ಎಂದು ಕೇಳಿದ್ದಾಳೆ.