

ಚಿಕ್ಕೋಡಿ: ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ಚಿಕ್ಕೋಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಸುಮಾರು ವರ್ಷಗಳಿಂದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದರೂ ಇಲ್ಲಿಯವರೆಗೆ ಯಾವ ಜನ ಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಮೂರ್ತಿ ಸ್ಥಾಪನೆಗೆ ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಅಧ್ಯಕ್ಷ ಸಂಜು ಬಡಿಗೇರ, ಸಂತೋಷ ಪೂಜೇರಿ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಅನಿಲ ನಾವಿ, ಮಾಳು ಕರೆನ್ನವರ, ಅಮೂಲ ನಾವಿ, ಹಾಲಪ್ಪ ಖದ್ದಿ, ಪ್ರತಾಪ ಪಾಟೀಲ, ರಫೀಕ್ ಮುಲ್ಲಾ, ಶಿವು ಮದಾಳೆ, ದುಂಡಪ್ಪ ಚೌಗಲಾ, ಮೈನುದ್ದಿನ್ ಬೇಪಾರಿ, ಚನ್ನಪ್ಪ ಬಡಿಗೇರ, ರಮೇಶ ಡಂಗೇರ, ಭೀಮಾ ನೇಜ ಇತರರಿದ್ದರು.