

ರಾಣೆಬೆನ್ನೂರ: ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ವಿದ್ಯಾಥಿರ್ಗಳಿಗಾಗಿ ಬಸ್ ನಿಲ್ಲಿಸಲು ಒತ್ತಾಯಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ತಾಲೂಕು ಟಕದ ವತಿಯಿಂದ ಸೋಮವಾರ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಟನೆಯ ತಾಲೂಕು ಅಧ್ಯಕ್ಷ ಗೌತಮ ಸಾವಕ್ಕನವರ ಮಾತನಾಡಿ, ನಗರದ ರೋಟರಿ ಪದವಿ ಪೂರ್ವ ಕಾಲೇಜ್ಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕಮಲಾ ನಗರ ಹಾಗೂ ಈಶ್ವರಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾಥಿರ್ನಿಯರು ನಿಲಯಕ್ಕೆ ಹೆಚ್ಚುವರಿ ಬಸ್ ಬಿಡಬೇಕು.
ಮಾಕನೂರ ಕ್ರಾಸ್ ಬಳಿ ಇಂಜಿನಿಯರಿಂಗ್, ರೋಟರಿ ಹೈಸ್ಕೂಲ್, ಪಿಯು ಕಾಲೇಜ್, ಆರ್.ಟಿ.ಇ.ಎಸ್. ಪದವಿ ಹಾಗೂ ಕಾನೂನು ವಿದ್ಯಾಥಿರ್ಗಳಿಗೆ ಅನುಕೂಲ ಆಗುವಂತೆ ದಾವಣಗೆರೆ, ಹರಿಹರ, ಶಿವಮೊಗ್ಗ ಮತ್ತು ಸ್ಥಳಿಯ ಎಲ್ಲ ಬಸ್ಗಳಿಗೆ ಕೋರಿಕೆ ನಿಲುಗಡೆ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಮಹೇಶ ಮುರೋಳ, ಪ್ರವಿಣ ಕೆ.ಎನ್., ಕುಬೇರ ಎಚ್., ಕಿಶನ್ ಡಿ., ನಿಕಿತ್ ಆರ್.ಯು., ಪ್ರಜ್ವಲ್ ಟಿ., ರಾಜೇಶ ಮತ್ತಿತರರು ಪಾಲ್ಗೊಂಡಿದ್ದರು.