

ಬೆಟ್ಟದಪುರ: ಭಾರತವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಯುವೇದ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೊಣಸೂರು ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸತೀಶ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಶನಿವಾರ ಸಮೀಪದ ಕೊಣಸೂರು ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯೋಜಿಸಿದ್ದ ಆಯುಷ್ಮಾನ್‌ಭವ ಕಾರ್ಯಕ್ರಮದಲ್ಲಿ ರೋಗಿಗಳ ತಪಾಸಣೆ ನಡೆಸಿ ಮಾತನಾಡಿದ ಅವರು, ಪಂಚಕರ್ಮದಂತಹ ಚಿಕಿತ್ಸೆಗಳು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ದೊರಕುವಂತಾಗಿದ್ದು, ಹಲವಾರು ರೋಗಗಳಿಗೆ ಆರ್ಯುವೇದ ಚಿಕತ್ಸೆ ಪರಿಪೂರ್ಣ ಪರಿಹಾರ ಒದಗಿಸಲಿದೆ ಎಂದು ತಿಳಿಸಿದರು.
ಯೋಗ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಮಕ್ಕಳಿಗೆ ಪಾಠ ಪ್ರವಚನಗಳಷ್ಟೇ ಅಲ್ಲದೆ ಅದರೊಂದಿಗೆ ಯೋಗ, ಧ್ಯಾನದ ತರಗತಿಗಳನ್ನು ಆಯುಷ್ ಇಲಾಖೆಯಿಂದ ನಡೆಸಲಾಗುತ್ತಿದೆ ಎಂದರು.
ಜಿ.ಪಂ ಮಾಜಿ ಸದಸ್ಯ ಕೆ.ರಾಜಶೇಖರ್, ರೈತ ಸಂಘದ ಅಧ್ಯಕ್ಷ ಆನಂದ್, ವೀರಪ್ಪ, ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮೀ, ಯೋಗ ತರಬೇತುದಾರೆ ಆಶಾ ಮಹದೇವರಾವ್ ಮತ್ತಿತರರು ಹಾಜರಿದ್ದರು.