

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸ್ ಕಮಿಷ್ನರೇಟ್ ಕಚೇರಿ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್ ಹಾಗೂ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ನೇತೃತ್ವದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಗೋಪಾಳ, ವಿಮಾನ ನಿಲ್ದಾಣ ಸಮೀಪ ಪೊಲೀಸ್ ಠಾಣೆ ಅಗತ್ಯವಿದೆ. ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಪ್ರತ್ಯೇಕ ಟ್ರಾಫಿಕ್ ಠಾಣೆ ತೆರೆಯಬೇಕಿದೆ. ಪೊಲೀಸರ ಆರೋಗ್ಯ ದೃಷ್ಟಿಯಿಂದ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ಬೇಕಿದೆ ಎಂದು ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ರವಿಕುಮಾರ್, ಎಂ.ಎಸ್.ಶಿವಕುಮಾರ್,ಕಲೀಮ್ ಪಾಷಾ, ವಿಶ್ವನಾಥ್ ಕಾಶಿ, ರಂಗೇಗೌಡ, ಚಿನ್ನಪ್ಪ ಇದ್ದರು.
ಎಂ.ಗುರುಮೂರ್ತಿ ನೇತೃತ್ವದಲ್ಲಿ ಜಿಲ್ಲೆಗೊಂದು ಫಾರೆನ್ಸಿಕ್ ಟೀಮ್‌ಗೆ ಸುಸಜ್ಜಿತವಾದ ಕಟ್ಟಡ, ಇಲಾಖೆಗೆ ಸಿಬ್ಬಂದಿ ನೇಮಕಾತಿ, ಸಂಚಾರ ನಿಯಂತ್ರಣಕ್ಕಾಗಿ ಉಪಕರಣಗಳು, ಸೈನ್ ಬೋರ್ಡ್ ನೀಡುವಂತೆ ಮನವಿ ಮಾಡಲಾಯಿತು.