ಮದ್ಯ, ಮಾ೦ಸ ಮಾರಾಟ ನಿಷೇಧಕ್ಕೆ ಆಗ್ರಹ

19 Dwd 5
Published on

ಧಾರವಾಡ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಪೂಜೆಯ ಹಿನ್ನೆಲೆಯಲ್ಲಿ ಜ. ೨೨ರಂದು ಮಧ್ಯ ಹಾಗೂ ಮಾ೦ಸ ಮಾರಾಟ ನಿಷೇಧ ಮಾಡಬೇಕು ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಜಿಲ್ಲಾಽಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸುದೀರ್ಘ ಹೋರಾಟದ -Àಲವಾಗಿ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯುತ್ತಿದೆ. ಪೂಜೆ, ಪುನಸ್ಕಾರ, ಪಾವಿರ್ತ್ಯ, ಸಂಪ್ರದಾಯ ಪಾಲನೆಯ ಹಿನ್ನೆಲೆಯಲ್ಲಿ ಯÁರೂ ಅನಾಚಾರ ಮಾಡಿದಂತೆ ಮುನ್ನೆಚ್ಚರಿಕೆ ವಹಿಸಿ, ಮದ್ಯ ಮತ್ತು ಮಾ೦ಸ ಮಾರಾಟ ನಿಷೇಧ ಮಾಡಬೇಕು ಎಂದು ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
ಹಿಂದು ಜಾಗರಣ ವೇದಿಕೆಯ ಉತ್ತರ ಪ್ರಾಂತ ಸಂಚಾಲಕ ಸು. ಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕ ಶ್ರೀಧರ ಕಲಬುರ್ಗಿ, ವಿಶ್ವನಾಥ ಬೂದುರು, ರವಿಕಿರಣ ಅಕ್ಕನಗೌಡರ, ಮಂಜುನಾಥ ಕಾನನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net