

ಹೊಳೆಹೊನ್ನೂರು: ಕನ್ನೇಕೊಪ್ಪ ಹಾಗೂ ಹೊನ್ನೂರಮ್ಮ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎರಡ್ಮೂರು ವರ್ಷದಿಂದ ಈ ಭಾಗದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ ಪೈಪ್‌ಲೈನ್ ಸಾಮರ್ಥ್ಯಕ್ಕಿಂತ ಹೆಚ್ಚಿನ ನಲ್ಲಿ ಸಂಪರ್ಕಗಳಿವೆ. ಅಲ್ಲದೆ ಪೈಪ್‌ಗಳು ಹಳೆಯದಾಗಿದ್ದು, ಅಲ್ಲಲ್ಲಿ ಒಡೆದು ನೀರು ಸೋರಿಕೆಯಾಗುತ್ತದೆ. ನೀರು ಸರಾಗವಾಗಿ ಹರಿಯದೆ ಕೆಲ ಮನೆಗಳಿಗೆ ತುಂಬ ಸಣ್ಣದಾಗಿ ಬರುತ್ತದೆ. ಎಲ್ಲ ಮನೆಗಳಿಗೂ ಸಮನಾಗಿ ನೀರು ಬರುತ್ತಿಲ್ಲ. ಇದರಿಂದ ನೀರಿನ ಕೊರತೆಯಾಗಿ ತೊಂದರೆಯಾಗುತ್ತಿದೆ ಎಂದು ದೂರಿದರು.
ಒಂದು ವಾರದಿಂದ ನೀರು ಸರಬರಾಜು ಮಾಡಿಲ್ಲ. ಸ್ಥಳೀಯರು ಹಲವು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಜಾವಾಬ್ದಾರಿ ತೋರುತ್ತಿದ್ದಾರೆ. ಜನರು ಪ್ರಶ್ನಿಸಿದರೆ ಉಡಾೆಯಿಂದ ಉತ್ತರ ನೀಡುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಹಳೇ ಪೈಪ್‌ಲೈನ್ ಬದಲಾಯಿಸಿ ಸಮರ್ಪಕ ನೀರು ಪೂರೈಸಬೇಕು ಎಂ ಆಗ್ರಹಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಆರ್.ಉಮೇಶ್, ಚಂದನ್, ಇ.ರಮೇಶ, ಎಂ.ಆರ್.ಕರಿಯಪ್ಪ, ಪುನೀತ್‌ಕುಮಾರ್, ಡಿ.ಶ್ರೀನಿವಾಸ, ವಾಜೀದ್, ಕುಮಾರ್ ಇತರರಿದ್ದರು.