ಕರಾವಳಿಗೆ ಪ್ರತ್ಯೇಕ ಮರಳು ನೀತಿಗೆ ಒತ್ತಾಯ | MP MLAs demand

Da Ka meeting
Published on

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ಮರಳು ನೀತಿ ಜಾರಿಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ದಕ್ಷಿಣಕನ್ನಡ ಜಿಲ್ಲೆಯ ಸಂಸದ, ಶಾಸಕರು ನಿಯೋಗ ಒತ್ತಾಯಿಸಿದೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬುಧವಾರ ಭೇಟಿಯಾದ ನಿಯೋಗ ದಕ್ಷಿಣಕನ್ನಡ ಜಿಲ್ಲೆಯ ಕೆಂಪು ಮುರಕಲ್ಲು (ಇಟ್ಟಿಗೆ) ಹಾಗೂ ಮರಳು ಸಮಸ್ಯೆಯನ್ನು ನಿವೇದಿಸಿಕೊಂಡಿತು.

ಕೃಷಿಗೆ ಉಪಯುಕ್ತವಲ್ಲದ ಗಟ್ಟಿ ಮುರ ತೆಗೆಯಲು ನಿಯಮಗಳು ಅಡ್ಡಿಯಾಗಿವೆ. ಅವೈಜ್ಞಾನಿಕ ಮರಳು ನೀತಿ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಸಿದೆ. ಇದರಿಂದಾಗಿ ಕಟ್ಟಡ ಕಾಮಗಾರಿಗಳು ನಡೆಯದೆ ಕಾರ್ಮಿಕರು, ಅವಲಂಬಿತರು ಬದುಕು ಬೀದಿಗೆ ಬಿದ್ದಿದೆ ಎಂದು ಸಂಸದ, ಶಾಸಕರು ವಿವರಿಸಿದರು.

ಬೇಡಿಕೆಗಳ ಮನವಿ

ಕೆಂಪು ಕಲ್ಲು ಕೋರೆ ಕೆಲಸವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರತುಗಿರಿಸಿ, ಪರವಾನಗಿ ವ್ಯವಸ್ಥೆ ಸರಳಗೊಳಿಸಬೇಕು.ಪ್ರತಿ ಟನ್ ಮುರ ಇಟ್ಟಿಗೆಗೆ ಶೇ.10ರಷ್ಟು ರಾಜಧನ ನಿಗದಿ, ವಿಪರೀತವಾಗಿ ಹೆಚ್ಚಿಸಿದ ರಾಜಧನವನ್ನು ಕೂಡಲೇ ತಗ್ಗಿಸಬೇಕು.

ರಾಜ್ಯದ ಇತರ ಭಾಗಗಳ ಮರಳುಗಾರಿಕೆ, ಕರಾವಳಿ ಭಾಗದ ಮರಳುಗಾರಿಕೆ ವಿಧಾನ ಸಂಪೂರ್ಣ ವ್ಯತ್ಯಾಸವಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ಮರಳು ನೀತಿ ಜಾರಿ, ಮರಳುಗಾರಿಕೆ ಮತ್ತು ಸಾಗಣೆ ಪರವಾನಗಿ ಸರಳೀಕರಣ, ತಾಲೂಕುಮಟ್ಟದಲ್ಲಿ ನಿರ್ವಹಣಾ ಸಮಿತಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗೆ ಭೇಟಿಯಾದ ನಿಯೋಗದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಬಿಜೆಪಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net