ಡೆಲಿವರಿ ಬಾಯ್ ಸೋಗಲ್ಲಿ ಕಳ್ಳತನಲಿವರಿ ಬಾಯ್ ಸೋಗಲ್ಲಿ ಕಳ್ಳತನ

arrested
Published on

ಬೆಂಗಳೂರು: ಡೆಲಿವರಿ ಬಾಯ್ ಸೋಗಿನಲ್ಲಿ ಬಂದು ಲೈಟ್ ಆ್ ಆಗಿರುವ ಮನೆಗೆ ಕಳ್ಳತನ ಮಾಡುತ್ತಿದ್ದ ಮೂವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಡತಿ ಗೇಟ್ ಸುತ್ತಮುತ್ತಲ ನಿವಾಸಿಗಳಾದ ದೀಕ್ಷಿತ್, ಕ್ಲಿಂಟನ್ ಮತ್ತು ಆಭರಣ ಅಂಗಡಿ ಮಾಲೀಕ ಮೋತಿಲಾಲ್ ಬಂಧಿತರು. 70 ಗ್ರಾಂ ಚಿನ್ನ, 2 ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ದೀಕ್ಷಿತ್ ಮತ್ತು ಬಿಇ ವ್ಯಾಸಂಗ ಕ್ಲಿಂಟನ್ ಸ್ನೇಹಿತರು. ಟೀ ಅಂಗಡಿ ಓಪನ್ ಮಾಡುವ ಉದ್ದೇಶಕ್ಕೆ ಬಂಡವಾಳ ಮಾಡಬೇಕೆಂದು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಡೆಲಿವರಿ ಬಾಯ್ ದೀಕ್ಷಿತ್, ಮಾ. 2 ರಂದು ಬೆಳ್ಳಂದೂರಿನ ಶುಭ್ ಏನ್‌ಕ್ಲೇವ್ ಲೇಔಟ್‌ನಲ್ಲಿ ಪಾರ್ಸೆಲ್ ಕೊಡಲು ಹೋದಾಗ ಸುಧಾಕರ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿದ್ದ.

ಮೂರ‌್ನಾಲ್ಕು ಗಂಟೆ ನಿಗಾ ವಹಿಸಿದಾಗ ಮನೆ ಒಳಗೆ ಲೈಟ್ ಆನ್ ಆಗದೆ ಇರುವುದನ್ನು ಗಮನಿಸಿ ತನ್ನ ಸ್ನೇಹಿತ ಕ್ಲಿಂಟನ್ ಜತೆಗೆ ಬಂದು ಬಾಲ್ಕನಿ ಹತ್ತಿ ಗ್ಲಾಸ್ ಡೋರ್ ಒಡೆದು ಒಳನುಗ್ಗಿದ್ದರು. ಮನೆಯಲ್ಲಿದ್ದ 210 ಗ್ರಾಂ ಚಿನ್ನ, 50 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕದ್ದ ಚಿನ್ನಾಭರಣ ಖರೀದಿ ಮಾಡಿರುವ ವ್ಯಾಪಾರಿ ಮೋತಿಲಾಲ್ನನ್ನೂ ಅರೆಸ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net