ಸ್ವಾದಿಷ್ಟಕರವಾದ ಫ್ರಾಂಕಿ ರೋಲ್​! ಅದ್ಯಾಕ್​ ತಡ ಮಾಡ್ತೀರ, ಈಗಲೇ ಟ್ರೈ ಮಾಡಿ | Recipe

untitled-design-2025-08-21t180041334-68a7117dc0313
Published on

Recipe: ಇಂದಿನ ದಿನಗಳಲ್ಲಿ ವಿಧ ವಿಧವಾದ ಆಹಾರ ಖಾದ್ಯಗಳನ್ನು ನಾವು ಗಮನಿಸಬಹುದು. ಉದಾಹರಣೆಗೆ ಪಿಜ್ಜಾ, ಬರ್ಗರ್​, ಫ್ರೆಂಚ್​ ಫ್ರೈಸ್, ರೋಲ್​ಗಳನ್ನು ಅಧಿಕವಾಗಿ ತಿನ್ನಲು ಇಂದಿನ ಸಮೂಹದವರು ಬಯಸುತ್ತಾರೆ. ಇನ್ನು ಹೊರಗೆ ಮಾಡುವ ಆಹಾರಗಳಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆದರಿಂದ ನೀವು ಮನೆಯಲ್ಲಿಯೇ ವೆಜ್ ಫ್ರಾಂಕಿ ರೆಸಿಪಿ ತಯಾರಿಸಿ ಸೇವಿಸುವುದರಿಂದ ನಮ್ಮ ಆರೋಗ್ಯವು ಸುಧಾರಿಸುತ್ತದೆ. ಹಾಗೇ ಈ ರೆಸಿಪಿಯನ್ನು ನಿಮ್ಮ ಮನೆಯಲ್ಲಿ ಮಾಡುವುದರಿಂದ ಎಲ್ಲರೂ ಇಷ್ಟಪಟ್ಟು ತಿನ್ನಲು ಬಯಸುತ್ತಾರೆ. ಹಾಗಿದ್ದರೆ ತಡ ಏಕೆ ಈಗಲೇ ಟ್ರೈ ಮಾಡಿ....

ಬೇಕಾಗುವ ಪದಾರ್ಥಗಳು

* 1 ಕಪ್ ಗೋಧಿ ಹಿಟ್ಟು

* 1 ಕಪ್ ಮೈದಾ ಹಿಟ್ಟು

* 1 ಚಮಚ ಉಪ್ಪು

* ಸ್ವಲ್ಪ ನೀರು

* 3 ಮಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆ

* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

* 1 ಚಮಚ ಮೆಣಸಿನ ಪುಡಿ

* 1 ಚಮಚ ಕೊತ್ತಂಬರಿ ಪುಡಿ

* 1 ಚಮಚ ಜೀರಿಗೆ ಪುಡಿ

* 1 ಚಮಚ ಚಾಟ್ ಮಸಾಲ

* 1 ಚಮಚ ಕಾರ್ನ್ ಸ್ಟಾರ್ಚ್

* 2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು

* 1 ಸಣ್ಣ ಈರುಳ್ಳಿ

* 1 ಸಣ್ಣ ಕ್ಯಾರೆಟ್

* 1 ಸಣ್ಣ ಸೌತೆಕಾಯಿ

* 1 ಚಮಚ ನಿಂಬೆ ರಸ ಅಥವಾ ವಿನೆಗರ್

* ಕರಿಯಲು ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು, ಮೈದಾ, ಉಪ್ಪು, ಮತ್ತು ಎಣ್ಣೆ ಬೆರೆಸಿ, ಕ್ರಮೇಣ ನೀರು ಸೇರಿಸಿ, ಮೃದವಾದ ರೊಟ್ಟಿ ಹಿಟ್ಟನ್ನು ತಯಾರಿಸಿ 15-20 ನಿಮಿಷ ನೆನೆಯಲು ಬಿಡಿ.

ನಂತರ ಮತ್ತೊಂದು ಬಟ್ಟಲಿನಲ್ಲಿ ಸ್ಮಾಶ್​ ಮಾಡಿದ ಆಲುಗಡ್ಡೆ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ, ಕಾರ್ನ್ ಸ್ಟಾರ್ಚ್, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿ ಆಲು ಟಿಕ್ಕಿಯನ್ನು ರೆಡಿಮಾಡಿಟ್ಟುಕೊಂಡು ಚಿಕ್ಕದಾದಿ ಅವುಗಳನ್ನು ಸಿಲಿಂಡರ್​ ಆಕಾರಕ್ಕೆ ತಯಾರು ಮಾಡಿಕೊಳ್ಳಿ. ಒಂದು ಪ್ಯಾನ್​ನಲ್ಲಿ 2-3 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ತಯಾರು ಮಾಡಿಟ್ಟುಕೊಂಡಿರುವ ಆಲೂ ಟಿಕ್ಕಿಗಳನ್ನು ಚಿನ್ನದ ಬಣ್ಣ ಬರುವವರೆಗೂ ಕರಿಯಿರಿ.

ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್, ಸೌತೆಕಾಯಿ ಚಾಟ್ ಮಸಾಲ ಮತ್ತು ನಿಂಬೆ ರಸ ಅಥವಾ ವಿನೆಗರ್ ಅನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ ಸಲಾಡ್​ ಮಿಶ್ರಣ ತಯಾರಿ ಮಾಡಿಕೊಳ್ಳಿ. ಈಗ ನೆನಯಲು ಇಟ್ಟಂತಹ ರೊಟ್ಟಿ ಹಿಟ್ಟನ್ನು ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ರೊಟ್ಟಿಯಾಗಿ ಬೇಯಿಸಿಕೊಳ್ಳಿ. ನಂತರ 1-2 ಆಲೂ ಟಿಕ್ಕಿಗಳನ್ನು ಮಧ್ಯದಲ್ಲಿ ಇರಿಸಿ, ಅಗತ್ಯವಿದ್ದರೆ ಸ್ವಲ್ಪ ಒತ್ತಿಕೊಂಡು ಫ್ರಾಂಕಿ ಮಸಾಲವನ್ನು ಸೇರ್ಪಡಿಸಿ. ಅದರ ಮೇಲೆ ತಯಾರಿಸಿಕೊಂಡಿರುವ ಸಲಾಡ್​ ಮಿಶ್ರಣವನ್ನು ಹಾಕಿ ವೆಜ್ ಫ್ರಾಂಕಿಯನ್ನು ತಯಾರಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net